ದೇಶ

ಭಾರತೀಯ ಸೇನೆಗೆ ಬೆಂಬಲ: ಕಲ್ಲು ತೂರಾಟಗಾರರಿಗೆ ಬುದ್ಧಿ ಕಲಿಸಲು ಬಂದ ಸ್ವಾಮೀಜಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಹರಸಾಹಸ ಪಡುತ್ತಿರುವ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿರುವ ಸ್ವಾಮೀಜಿಯೊಬ್ಬರು, ಕಲ್ಲು ತೂರಾಟಗಾರರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ...

ಭಾರತೀಯ ಸೇನೆಗೆ ಬೆಂಬಲ: ಕಲ್ಲು ತೂರಾಟಗಾರರಿಗೆ ಬುದ್ಧಿ ಕಲಿಸಲು ಬಂದ ಸ್ವಾಮೀಜಿ
ಭಾರತೀಯ ಸೇನೆಗೆ ಬೆಂಬಲ: ಕಲ್ಲು ತೂರಾಟಗಾರರಿಗೆ ಬುದ್ಧಿ ಕಲಿಸಲು ಬಂದ ಸ್ವಾಮೀಜಿ
Published On :
ಕಾನ್ಪುರ (ಉತ್ತರಪ್ರದೇಶ): ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಹರಸಾಹಸ ಪಡುತ್ತಿರುವ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿರುವ ಸ್ವಾಮೀಜಿಯೊಬ್ಬರು, ಕಲ್ಲು ತೂರಾಟಗಾರರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ. 
ಕಲ್ಲು ತೂರಾಟಗಾರರಿಗೆ ಪಾಠ ಕಲಿಸಲು ಮುಂದಾಗಿರುವ ಸ್ವಾಮೀಜಿ, ಇದಕ್ಕಾಗಿ ಜನಸೇನಾ ಎಂಬ ಸಂಘಟನೆಯನ್ನು ಕಟ್ಟಿ, ಸಂಘಟನೆಗೆ ಸೇರ್ಪಡೆಗೊಳ್ಳುವ ಯುವಕರಿಗೆ ಕಲ್ಲು ತೂರಾಟ ಕುರಿತಂತೆ ತರಬೇತಿಯನ್ನು ನೀಡುತ್ತಿದ್ದಾರೆ. 
ಅರುಣ್ ಪುರಿ ಚೈತನ್ಯಾಜಿ ಮಹಾರಾಜ್ ಎಂಬ ಸ್ವಾಮೀಜಿ ಜನಸೇನಾ ಸಂಘಟನೆಯನ್ನು ಸ್ಥಾಪನೆ ಮಾಡಿದ್ದಾರೆ. ಸಂಘಟನೆಯಲ್ಲಿ ಮುಸ್ಲಿಮರು, ಸಾಧುಗಳು ಸೇರಿದಂತೆ ನೂರಾರು ನಾಗರಿಕರಿದ್ದು, ಈಗಾಗಲೇ ಕಾಶ್ಮೀರ ಕಣಿವೆ ಪ್ರವೇಶಿಸಿದ್ದಾರೆ. 
ಮೇ.10 ರಂದು ಸಂಘಟನೆ ಶ್ರೀನಗರ ಲಾಲ್ ಚೌಕ್ ನಲ್ಲಿ ಯಜ್ಞ ನಡೆಸಲಿದೆ. ಪಾಕಿಸ್ತಾನ ಸೈನಿಕರು ನಮ್ಮ ಯೋಧರ ಶಿರಚ್ಛೇದ ಮಾಡಿದ್ದ ಪೂಂಚ್ ಹಾಗೂ ಕೃಷ್ಣ ಘಾಟಿ ಪ್ರದೇಶಗಳಿಗೂ ಭೇಟಿ ನೀಡಲು ಸ್ವಾಮೀಜಿ ನಿರ್ಧರಿಸಿದ್ದಾರೆ. 
ನಮ್ಮ ಯೋಧರ ಮೇಲೆ ಪ್ರತಿನಿತ್ಯ ಕಲ್ಲುತೂರಾಟ ನಡೆಸಲಾಗುತ್ತದೆ. ಇದನ್ನು ತಡೆಯಲು ಸೇನೆ ಮೇಲೆ ಕಲ್ಲು ತೂರಾಟ ನಡೆಸುವವರ ವಿರುದ್ಧವೇ ನಾವು ಕಲ್ಲು ತೂರಾಟ ನಡೆಸುತ್ತೇವೆಂದು ಸ್ವಾಮೀಜಿ ಹೇಳಿದ್ದಾರೆ. 
ಇದಕ್ಕಾಗಿ ನಾವು ಸಂಘಟನೆಯೊಂದನ್ನು ಕಟ್ಟಿದ್ದು, ಯುವಕರಿಗೆ ಕಲ್ಲು ತೂರಾಟದಲ್ಲಿ ತರಬೇತಿ ನೀಡಲಾಗುತ್ತಿದೆ. ಸುಮಾರು 1 ಸಾವಿರಕ್ಕೂ ಅಧಿಕ ಯುವಕ ಮತ್ತು ಯುವತಿಯರಿಗೆ ಕಲ್ಲು ತೂರಾಟದಲ್ಲಿ ತರಬೇತಿ ನೀಡಲಾಗಿದೆ. ಲಾರಿ ತುಂಬಾ ಕಲ್ಲುಗಳನ್ನು ಸಂಗ್ರಹಿಸಲಾಗಿದ್ದು. ಈ ಕಲ್ಲುಗಳನ್ನು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವವರ ವಿರುದ್ಧ ಪ್ರಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.