ಉತ್ತರ ಪ್ರದೇಶ ಗೆಲುವಿನಿಂದ ಹೊರಬನ್ನಿ, ನಮ್ಮ ಯೋಧರನ್ನು ರಕ್ಷಿಸಿ: ಪ್ರಧಾನಿ ಮೋದಿಗೆ ಶಿವಸೇನೆ
ಯೋಧರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತಿರುಗಿಬಿದ್ದಿದ್ದ ಶಿವಸೇನೆ ಮತ್ತೆ ಮೋದಿಯವರ ವಿರುದ್ಧ ಬುಧವಾರ ತನ್ನ ವಾಗ್ದಾಳಿಯನ್ನು ಮುಂದುವರೆಸಿದೆ...

Published On :
ನವದೆಹಲಿ: ಯೋಧರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತಿರುಗಿಬಿದ್ದಿದ್ದ ಶಿವಸೇನೆ ಮತ್ತೆ ಮೋದಿಯವರ ವಿರುದ್ಧ ಬುಧವಾರ ತನ್ನ ವಾಗ್ದಾಳಿಯನ್ನು ಮುಂದುವರೆಸಿದೆ.
ಯೋಧರ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನ ಪ್ರಕರಣ ಕುರಿತಂತೆ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ ಪ್ರಧಾನಿ ಮೋದಿಯವರ ವಿರುದ್ದ ಟೀಕೆಗಳನ್ನು ಮಾಡಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ವೈಮನಸ್ಸು ಕುರಿತಂತೆ ಭಾರತಕ್ಕೆ ಎಷ್ಟು ರಾಷ್ಟ್ರಗಳು ಬೆಂಬಲವನ್ನು ಸೂಚಿಸುತ್ತದೆ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಹಿರಂಗಪಡಿಸಬೇಕು.
ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಈ ಹಿಂದಿನ ಹೇಳಿಕೆಗಳು ಹಾಗೂ ಸ್ಥಾನಕ್ಕೆ ಅವರು ನೀಡಿದ್ದ ರಾಜಿನಾಮೆಯನ್ನು ನೋಡಿದರೆ, ಉಭಯ ರಾಷ್ಟ್ರಗಳ ಸಮಸ್ಯೆ ಕುರಿತಂತೆ ಸರ್ಕಾರ ಎಷ್ಟರ ಪಟ್ಟಿದೆ ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಶಿವಸೇನೆ ಹೇಳಿಕೊಕಂಡಿದೆ.
ಇದೇ ವೇಳೆ ಪ್ರಸ್ತುತ ರಕ್ಷಣಾ ಖಾತೆಯನ್ನು ನಿಭಾಯಿಸುತ್ತಿರುವ ಅರುಣ್ ಜೇಟ್ಲಿಯವರ ವಿರುದ್ಧವೂ ಸಾಮ್ನಾ ವಾಗ್ದಾಳಿ ನಡೆಸಿದ್ದು, ಕೇವಲ ತೋರ್ಪಡಿಕೆ ಹೇಳಿಕೆಗಳಿಂದ ಸಮಸ್ಯೆಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ ಎಂದು ತಿಳಿಸಿದೆ.
ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಬಿಜೆಪಿ ಸರ್ಕಾರ ಒಬ್ಬ ಯೋಧನ ತಲೆಗೆ 10 ಪಾಕಿಸ್ತಾನ ಯೋಧರ ತಲೆಯುರುಳಿಸಬೇಕೆಂದು ಹೇಳಿತ್ತು. ಇದೀಗ ಆಡಳಿತ ಬದಲಾದರೂ, ನಮ್ಮ ಯೋಧರು ಅನಾಗರೀಕರ ಪೈಶಾಚಿಕ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ ಎಂದಿದೆ.
ಉರಿ, ಮಚಿಲ್ ಹಾಗೂ ಪಠಾಣ್ ಕೋಟ್ ಸೇನಾ ನೆಲೆ ಮೇಲೆ ನಡೆಸದಾ ದಾಳಿಗೆ ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಗಳ ಬಳಿ ಸೇನೆ ಸೀಮಿತ ದಾಳಿಯನ್ನು ನಡೆಸಿತ್ತು. ಉತ್ತರಪ್ರದೇಶ ಗೆಲವನ್ನೇ ಬಿಜೆಪಿ ದೊಡ್ಡ ಗೆಲುವು, ದೊಡ್ಡ ಸಾಧನೆಯೆಂಬಂತೆ ಬೀಗುತ್ತಿದೆ. ಆದರೆ, ಭಾರತೀಯ ಯೋಧರು ಗಡಿಯಲ್ಲಿ ಜೀವ ಕಳೆದುಕೊಳ್ಳುತ್ತಿರುವುದು ನಮ್ಮ ದೇಶಕ್ಕೆ ಎದುರಾಗುತ್ತಿರುವ ದೊಡ್ಡ ಸೋಲು ಎಂಬುದನ್ನು ನಾಯಕರು ತಿಳಿದುಕೊಳ್ಳಬೇಕಿದೆ ಎಂದು ಶಿವಸೇನೆ ಸಾಮ್ನಾದಲ್ಲಿ ಹೇಳಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


