ದೇಶ

ಮತ್ತೆ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ; ಮೆಂದಾರ್ ಸೆಕ್ಟರ್ ನಲ್ಲಿ ಭಾರಿ ಗುಂಡಿನ ಚಕಮಕಿ

ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಮೆಂದಾರ್ ಸೆಕ್ಟರ್ ನಲ್ಲಿ ಭಾರತೀಯ ಪೋಸ್ಚ್ ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ.

ಮತ್ತೆ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ; ಮೆಂದಾರ್ ಸೆಕ್ಟರ್ ನಲ್ಲಿ ಭಾರಿ ಗುಂಡಿನ ಚಕಮಕಿ
ಸಂಗ್ರಹ ಚಿತ್ರ
Published On :

ಶ್ರೀನಗರ: ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಮೆಂದಾರ್ ಸೆಕ್ಟರ್ ನಲ್ಲಿ ಭಾರತೀಯ ಪೋಸ್ಚ್ ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ.

ಬುಧವಾರ ಮುಂಜಾನೆ ಮೆಂಧಾರ್ ನ ಮನ್ ಕೋಟೆ ಪ್ರದೇಶದಲ್ಲಿ ಮೇಲೆ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ಆರಂಭಿಸಿದ್ದು, ಭಾರತೀಯ ಸೈನಿಕರು ಕೂಡ ಪಾಕ್ ಸೈನಿಕರಿಗೆ ದಿಟ್ಟ ಉತ್ತರ ನೀಡುತ್ತಿದ್ದಾರೆ. ಈ ವರೆಗೂ ಗುಂಡಿನ  ಚಕಮಕಿ ನಡೆಯುತ್ತಿದ್ದು, ಯಾವುದೇ ಸಾವುನೋವಿನ ಕುರಿತು ವರದಿಯಾಗಿಲ್ಲ.

ಇನ್ನು ಇದೇ ಭಾನುವಾರ ಭಾರತದ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಕೊಂದು ಅವರ ಶಿರಚ್ಛೇದ ಮಾಡಿದ್ದರು. ಈ ಸಂಬಂಧ ತಕ್ಕ ಪ್ರತಿಕ್ರಿಯೆ ನೀಡಿದ್ದ ಭಾರತೀಯ ಸೇನೆ  ಪಾಕಿಸ್ತಾನ ಗಡಿಯಲ್ಲಿನ 7 ಸೇನಾ ಪೋಸ್ಟ್ ಗಳನ್ನು ಧ್ವಂಸಗೊಳಿಸಿತ್ತು. ಈ ವೇಳೆ ಹಲವು ಪಾಕ್ ಸೈನಿಕರು ಹತರಾಗಿದ್ದರು ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ಆದರೂ ಪಾಕಿಸ್ತಾನ ಮಾತ್ರ ತಮ್ಮ ಸೈನಿಕರು ಭಾರತೀಯ ಯೋಧರ  ಶಿರಚ್ಛೇದ ಮಾಡಿಲ್ಲ ಎಂದು ತನ್ನ ಮೊಂಡುವಾದ ಮಂಡಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.