ಪಾಕಿಸ್ತಾನ ಸೈನಿಕರು ಅನಾಗರೀಕತೆಯನ್ನು ಪ್ರದರ್ಶಿಸುತ್ತಿದ್ದಾರೆ: ಗುಲಾಂ ನಬಿ ಆಜಾದ್
ಯೋಧರ ಶಿರಚ್ಧೇದ ಮಾಡಿರುವ ಪಾಕಿಸ್ತಾನ ಸೈನಿಕರ ವರ್ತನೆಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನ ಸೇನೆ ತನ್ನ ಅನಾಗರೀಕ ವರ್ತನೆಯನ್ನು ಪ್ರದರ್ಶಿಸಿದೆ ಎಂದು...

Published On :
ನವದೆಹಲಿ: ಯೋಧರ ಶಿರಚ್ಧೇದ ಮಾಡಿರುವ ಪಾಕಿಸ್ತಾನ ಸೈನಿಕರ ವರ್ತನೆಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದು, ಪಾಕಿಸ್ತಾನ ಸೇನೆ ತನ್ನ ಅನಾಗರೀಕ ವರ್ತನೆಯನ್ನು ಪ್ರದರ್ಶಿಸಿದೆ ಎಂದು ಮಂಗಳವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರನ್ನು ಹತ್ಯೆಗೈದು ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯವೆಸಗಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಗುಲಾಂ ನಬಿ ಆಜಾದ್ ಅವರು, ಕಾಶ್ಮೀರದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಭಾರತ ಮತ್ತು ಭದ್ರತೆ ಕುರಿತಂತೆ ಚಿಂತೆಯನ್ನುಂಟು ಮಾಡಿದೆ. ಈ ರೀತಿಯ ಕೃತ್ಯಗಳು ಪಾಕಿಸ್ತಾನ ಸೇನೆ ಅನಾಗರೀಕತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಏಕೆಂದರೆ, ಸರ್ಕಾರ ಈ ವರೆಗೂ ಕಾಶ್ಮೀರ ಸಮಸ್ಯೆ ಕುರಿತಂತೆ ಮಾತುಕತೆಗೆ ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ. ನೆರೆರಾಷ್ಟ್ರದೊಂದಿಗಿನ ಸಂಬಂಧ ಹದಗೆಟ್ಟಿದ್ದರು. ಪಾಕಿಸ್ತಾನದ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವ ಕುರಿತು ಭಾರತ ಸರ್ಕಾರ ಮಾತನಾಡುತ್ತಿಲ್ಲ. ಎರಡು ರಾಷ್ಟ್ರಗಳ ಜನತೆಗೆ ಇದು ನಿಜಕ್ಕೂ ದುರಂತದ ಪರಿಸ್ಥಿತಿಯಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ವಿಫವಾಗಿದೆ ಎಂದು ಎನಿಸತೊಡಗಿದೆ. ಪಾಕಿಸ್ತಾನ ಮತ್ತು ಅದರ ಸೇನೆ ಕುರಿತಂತೆ ನಾವು ಎಷ್ಟೇ ಟೀಕೆಗಳನ್ನು ವ್ಯಕ್ತಪಡಿಸಿದರೂ, ಅದಕ್ಕೆ ಅರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


