2017 ರಲ್ಲಿ 600 ಗ್ರಾಮಗಳನ್ನು ಡಿಜಿಟಲ್ ಸಶಕ್ತಗೊಳಿಸಲಿರುವ ಐಸಿಐಸಿಐ
ಈಗಾಗಲೇ 100 ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಿರುವುದಾಗಿ ಹೇಳಿರುವ ಐಸಿಐಸಿಐ ಬ್ಯಾಂಕ್ ವರ್ಷಾಂತ್ಯಕ್ಕೆ 500 ಗ್ರಾಮಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ಹೇಳಿದೆ.

Published On :
ನವದೆಹಲಿ: ಈಗಾಗಲೇ 100 ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಿರುವುದಾಗಿ ಹೇಳಿರುವ ಐಸಿಐಸಿಐ ಬ್ಯಾಂಕ್ ವರ್ಷಾಂತ್ಯಕ್ಕೆ 500 ಗ್ರಾಮಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ಹೇಳಿದೆ.
100 ಗ್ರಾಮಗಳಿಗೆ ಡಿಜಿಟಲ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, "ಐಸಿಐಸಿಐ ನ ಮಾದರಿಯನ್ನು ಉಳಿದ ಬ್ಯಾಂಕ್ ಗಳೂ ಸಹ ಅನುಸರಿಸಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ಒಳಾಗೂಡುವಿಕೆ ಯೋಜನೆಗೆ ಕ್ರಮ ಕೈಗೊಂಡಿದ್ದು, ಪ್ರತಿಯೊಂದು ಮನೆಗೂ ಒಂದು ಬ್ಯಾಂಕ್ ಖಾತೆ ಇರುವಂತಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಜನರು ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಂದಿದ್ದಾರೆ, ಡಿಜಿಟಲೀಕರಣದಿಂದ ಹೊಸ ತಂತ್ರಜ್ಞಾನಗಳು ಪರಿಚಯವಾಗಿವೆ. ಆರ್ಥಿಕ ಸುಧಾರಣೆಯ ಕ್ರಮಗಳು ಗ್ರಾಮಗಳಿಗೂ ತಲುಪುತ್ತಿವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಐಸಿಐಸಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ಚಂದಾ ಕೊಚ್ಚಾರ್ 100 ದಿನಗಳಲ್ಲಿ ಐಸಿಐಸಿಐ ಬ್ಯಾಂಕ್ 100 ಗ್ರಾಮಗಳನ್ನು ಡಿಜಿಟಲೀಕರಣಕ್ಕೆ ರೂಪಾಂತರಗೊಳಿಸಿದೆ. ವರ್ಷಾಂತ್ಯಕ್ಕೆ 500 ಗ್ರಾಮಗಳನ್ನು ಡಿಜಿಟಲ್ ಸಶಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


