ದೇಶ

ದೇಶ ಕಟ್ಟಿದ ಜನರಿಗೆ ಪ್ರಧಾನಿ ಮೋದಿ ಏಕೆ ಪರಿಹಾರ ನೀಡುತ್ತಿಲ್ಲ: ರಾಹುಲ್ ಗಾಂಧಿ

ಆಡಳಿತಾರೂಢ ಎನ್ ಡಿಎ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ದೇಶದ ಕಟ್ಟಿದ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರಿ ಮೋದಿಯವರು ಬರ ಪರಿಹಾರವನ್ನೇಕೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಪ್ರಶ್ನಿಸಿದ್ದಾರೆ.

ದೇಶ ಕಟ್ಟಿದ ಜನರಿಗೆ ಪ್ರಧಾನಿ ಮೋದಿ ಏಕೆ ಪರಿಹಾರ ನೀಡುತ್ತಿಲ್ಲ: ರಾಹುಲ್ ಗಾಂಧಿ
ಪ್ರತಿಭಟನೆಗೆ ಸಾಥ್ ನೀಡಿದ ರಾಹುಲ್ ಗಾಂಧಿ
Published On :

ನವದೆಹಲಿ: ಆಡಳಿತಾರೂಢ ಎನ್ ಡಿಎ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ದೇಶದ ಕಟ್ಟಿದ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರಿ ಮೋದಿಯವರು ಬರ ಪರಿಹಾರವನ್ನೇಕೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಶುಕ್ರವಾರ ಪ್ರಶ್ನಿಸಿದ್ದಾರೆ.

ಬರ ಪರಿಹಾರ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಜಂತರ್ ಮಂತರ್ ನಲ್ಲಿ ತಮಿಳುನಾಡು ರಾಜ್ಯ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಕೈಜೋಡಿಸಿದರು. ಈ ವೇಳೆ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶ್ರೀಮಂತರ ಪರವಾಗಿರುವ ಸರ್ಕಾರ ದೇಶಕ್ಕೆ ಒಳ್ಳೆಯದಲ್ಲ. ಈಗಿನ ಆಡಳಿತಾರೂಢ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ಕಳೆದ 3 ವರ್ಷಗಳಿಂದ ಭಾರತ ಸರ್ಕಾರ ಸಾಕಷ್ಟು  ಹಣವನ್ನು ಶ್ರೀಮಂತ ಜನರಿಗೆ ನೀಡಿದೆ. ಸರ್ಕಾರ ಈ ರೀತಿಯ ತಾರತಮ್ಯವನ್ನೇಕೆ ಮಾಡಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಶ್ರೀಮಂತರಿಗೇಕೆ ಪ್ರಧಾನಿ ಮೋದಿಯವರು ಬಡವರ ಹಣವನ್ನು ನೀಡುತ್ತಿದ್ದಾರೆ?  ದೇಶವನ್ನು ಕಟ್ಟಿದ ಜನರಿಗೇಕೆ ಪರಿಹಾರವನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ರೈತರ ಸಂಕಷ್ಟಗಳನ್ನು ಪ್ರಧಾನಿ ಮೋದಿಯವರು ಕೇಳಬೇಕಿದೆ. ಬರ ಪರಿಹಾರದಲ್ಲಿ ಮೂರು ಆಗ್ರಹಗಳಿವೆ. ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರಿಗೆ ಸರ್ಕಾರ ಬೆಂಬಲ ನೀಡಬೇಕು ಮತ್ತು ಬೆಳೆ ನಷ್ಟ  ಸಮಸ್ಯೆಗೆ ಪರಿಹಾರದ ಅಗತ್ಯವಿದೆ. ಆದರೆ, ತಮಿಳುನಾಡಿನ ರೈತರನ್ನು ಸಂಪೂರ್ಣವಾಗಿ ಅಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.