ದೇಶ

ದಸರಾ ವೇಳೆ ಪ್ರಧಾನಿ ಮೋದಿ ಹತ್ಯೆಗೆ ಇಸಿಸ್ ಶಂಕಿತರು ವಿಫಲ ಸಂಚು ನಡೆಸಿದ್ದರು: ಎನ್ಐಎ

ಶಂಕಿತ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ವಿಫಲ ಸಂಚು ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ)...

ದಸರಾ ವೇಳೆ ಪ್ರಧಾನಿ ಮೋದಿ ಹತ್ಯೆಗೆ ಇಸಿಸ್ ಶಂಕಿತರು ವಿಫಲ ಸಂಚು ನಡೆಸಿದ್ದರು: ಎನ್ಐಎ
ನರೇಂದ್ರ ಮೋದಿ-ಇಸಿಸ್
Published On :
ನವದೆಹಲಿ: ಶಂಕಿತ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ವಿಫಲ ಸಂಚು ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ವಿಚಾರವನ್ನು ಬಹಿರಂಗಪಡಿಸಿದೆ. 
ಇತ್ತೀಚೆಗೆ ಉಜ್ಜಯಿನಿಯಲ್ಲಿ ಪ್ರಯಾಣಿಕ ರೈಲೊಂದರಲ್ಲಿ ಬಾಂಬ್ ಸ್ಫೋಟ ನಡೆಸಿದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರು ದಸರಾ ಸಂದರ್ಭದಲ್ಲಿ ಲಖನೌದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲೂ ಸ್ಫೋಟ ನಡೆಸಲು ವಿಫಲ ಯತ್ನ ನಡೆಸಿದ್ದರು ಎಂಬ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. 
ಉಜ್ಜಯಿನಿ ರೈಲು ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್ಐಎ ಮೊಹಮ್ಮದ್ ದಾನಿಶ್ ಮತ್ತು ಆತಿಫ್ ಮುಜಫ್ಫರ್ ಎಂಬ ಶಂಕಿತರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಈ ವೇಳೆ ಬಂಧಿತರು ಅಕ್ಟೋಬರ್ 17ರಂದು ಮೋದಿ ಅವರು ಲಖನೌ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಸ್ಫೋಟ ನಡೆಯಲು ಯತ್ನಿಸಿದ್ದೇವು ಎಂದು ಹೇಳಿದ್ದಾರೆ. 
ನಾವು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ವಂಸಕ ಕೃತ್ಯ ನಡೆಸಲು ತೀರ್ಮಾನಿಸಿದ್ದೇವು ಹೀಗಾಗಿ ನನ್ನ ಸ್ನೇಹಿತ ಆತಿಫ್ ಸೈಕಲ್ ಅಂಗಡಿಗೆ ಹೋಗಿ 2 ಪೊಟ್ಟಣ ಬಾಲ್ ಬೇರಂಗ್ ಗಳು ಮತ್ತು ನಟ್ಟುಗಳನ್ನು ತಂದಿದ್ದ. ಪ್ರಧಾನಿ ಭಾಗವಹಿಸುವ ರ್ಯಾಲಿ ಸ್ಥಳದ ಸರ್ವೇಕ್ಷಣೆ ನಡೆಸಿದ್ದೇವು ಎಂದು ದಾನಿಶ್ ಹೇಳಿದ್ದಾನೆ. 
ಇದಾದ ಬಳಿಕ ಬಾಂಬ್ ಸಿದ್ಧಪಡಿಸಿ ದಸರಾ ಹಿಂದಿನ ದಿವಸ ರಾಮಲೀಲಾ ಮೈದಾನ ಸನಿಹದ ಕಸದ ತೊಟ್ಟಿಯಲ್ಲಿ ಇಡಲಾಯಿತು. ಅದಕ್ಕೆ ಟೈಮರ್ ಕೂಡ ಅಳವಡಿಸಲಾಗಿತ್ತು. ಮೋದಿ ಸಮಾರಂಭದಲ್ಲಿ ಪಾಲ್ಗೊಂಡಾಗ ಬಾಂಬ್ ಸ್ಫೋಟಿಸಿದ ಸುದ್ದಿ ಬರುತ್ತದೆ ಎಂದುಕೊಂಡಿದ್ದೇವು ಆದರೆ ಹಾಗಾಗಲಿಲ್ಲ ಮರುದಿನ ಹೋಗಿ ಸ್ಥಳವೀಕ್ಷಣೆ ಮಾಡಿದಾಗ ಅಲ್ಲಿ ಕೆಲ ವೈರ್ ಗಳು ಮಾತ್ರ ಇದ್ದವು. ನಾವಿಟ್ಟಿದ್ದ ಬಾಂಬ್ ಇರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.