ಸೂರ್ಯ ನಮಸ್ಕಾರ ಮತ್ತು ನಮಾಜ್ ನಡುವೆ ಸಾಮ್ಯತೆ ಇದೆ: ಸಿಎಂ ಯೋಗಿ ಆದಿತ್ಯನಾಥ್
ಸೂರ್ಯ ನಮಸ್ಕಾರ ಮತ್ತು ನಮಾಜ್ ನಡುವೆ ಬಹಳಷ್ಟು ಸಾಮ್ಯತೆಗಳಿವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್..

ಲಕ್ನೋ: ಸೂರ್ಯ ನಮಸ್ಕಾರ ಮತ್ತು ನಮಾಜ್ ನಡುವೆ ಬಹಳಷ್ಟು ಸಾಮ್ಯತೆಗಳಿವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶ ಯೋಗ ಮಹೋತ್ಸವದಲ್ಲಿ ಮಾತನಾಡಿದ ಆದಿತ್ಯನಾಥ್, ಸೂರ್ಯ ನಮಸ್ಕಾರ ಮತ್ತು ನಮಾಜ್ ಮಾಡುವಾಗ ದೇಹದ ಭಂಗಿಗಳಲ್ಲಿ ಬಹುತೇಕ ಸಾಮ್ಯತೆಯುಳ್ಳವುಗಳಾಗಿವೆ ಎಂದಿದ್ದಾರೆ.
ಯೋಗ ಮತ್ತು ಸೂರ್ಯ ನಮಸ್ಕಾರ ಮಾಡುವುದು ಧರ್ಮ ವಿರೋಧಿ, ನಮ್ಮ ಧರ್ಮದಲ್ಲಿ ಇಂಥಹ ಅಭ್ಯಾಸ ರೂಢಿಸಿಕೊಳ್ಳಲು ಬಿಡುವುದಿಲ್ಲ ಎಂದು ಅನೇಕ ಮುಸ್ಲಿಂ ಸಂಘಟನೆಗಳು ವಿರೋಧಿಸುತ್ತವೆ ಎಂದು ಹೇಳಿದ್ದಾರೆ.
ಯೋಗಕ್ಕೆ ಉತ್ತೇಜನ ನೀಡಲು ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಆಯುಷ್ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದ ಯೋಗಿ ಆದಿತ್ಯನಾಥ್, ಈ ಮೊದಲು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೇ ಅದನ್ನು ಕೋಮುವಾದ ಎಂಬಂತೆ ಬಿಂಬಿಸಲಾಗುತ್ತಿತ್ತು ಎಂದು ಅವರು ಹೇಳಿದರು.
ಸೂರ್ಯ ನಮಸ್ಕಾರ ಮತ್ತು ನಮಾಜ್ ನ ಹಲವು ಭಂಗಿಗಳಲ್ಲಿ ಸಾಮ್ಯತೆಗಳಿವೆ, ಆದರೆ ಎರಡನ್ನು ಒಟ್ಟಿಗೆ ತರಲು ಇದುವರೆಗೂ ಪ್ರಯತ್ನ ಮಾಡಿಲ್ಲ ಎಂದು ಹೇಳಿದ ಅವರು, ಕೆಲ ಜನರಿಗೆ ಮತಗಳ ಉಪಯೋಗದ ಬಗ್ಗೆ ತಿಳಿದಿತ್ತು, ಅವರಿಗೆ ಯೋಗದ ಮಹತ್ವದ ಬಗ್ಗೆ ಗೊತ್ತಿರಲಿಲ್ಲ, ಹೀಗಾಗಿ ಅವರು ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸಿದರು ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


