ಮನೋರೋಗಿಗಳ ಆತ್ಮಹತ್ಯೆ ಯತ್ನ ಇನ್ನುಮುಂದೆ ಅಪರಾಧವಲ್ಲ!
ಮಾನಸಿಕ ಅಸ್ವಸ್ತ ವ್ಯಕ್ತಿಗಳ ಆತ್ಮಹತ್ಯೆ ಯತ್ನವನ್ನು ಅಪರಾಧವಲ್ಲ ಎಂದು ಪರಿಗಣಿಸುವ ಮತ್ತು ಮಾನಸಿಕ ಅಸ್ವಸ್ಥರಿಗೆ ವಿದ್ಯುತ್ ಶಾಕ್ ಥೆರಪಿ ಚಿಕಿತ್ಶೆ ಮೇಲೆ ನಿಷೇಧ ಹೇರುವ ಮಸೂದೆಯೊಂದಕ್ಕೆ ಲೋಕಸಭೆ ಅನುಮೋದನೆ ನೀಡಿದೆ...

Published On :
ನವದೆಹಲಿ: ಮಾನಸಿಕ ಅಸ್ವಸ್ತ ವ್ಯಕ್ತಿಗಳ ಆತ್ಮಹತ್ಯೆ ಯತ್ನವನ್ನು ಅಪರಾಧವಲ್ಲ ಎಂದು ಪರಿಗಣಿಸುವ ಮತ್ತು ಮಾನಸಿಕ ಅಸ್ವಸ್ಥರಿಗೆ ವಿದ್ಯುತ್ ಶಾಕ್ ಥೆರಪಿ ಚಿಕಿತ್ಶೆ ಮೇಲೆ ನಿಷೇಧ ಹೇರುವ ಮಸೂದೆಯೊಂದಕ್ಕೆ ಲೋಕಸಭೆ ಅನುಮೋದನೆ ನೀಡಿದೆ.
2016ರ ಆಗಸ್ಟ್ ತಿಂಗಳಿನಲ್ಲಿ 100ಕ್ಕೂ ಹೆಚ್ಚು ತಿದ್ದುಪಡಿಗಳೊಂದಿಗೆ ಇದೇ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿತ್ತು. ಈ ಮಸೂದೆ ಸಂಬಂಧ ಲೋಕಸಭೆಯಲ್ಲಿ ನಿನ್ನೆ ಚರ್ಚೆ ನಡೆಸಿತು. ಬಹುತೇಕ ಪಕ್ಷಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದವು. ಧ್ವನಿ ಮತದ ಮೂಲಕ ಕೊನೆಗೂ ಮಸೂದೆಗೆ ಸಂಸತ್ತಿನಲ್ಲಿ ಒಪ್ಪಿಗೆ ಸಿಕ್ಕಿದೆ.
ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುವ ವ್ಯಕ್ತಿಗಳು ಆಸ್ತಿ ಹೊಂದುವ ಅಧಿಕಾರವನ್ನು ನೂತನ ಮಾನಸಿಕ ಆರೋಗ್ಯ ಮಸೂದೆ ಕಲ್ಪಿಸಲಿದೆ. ಜೊತೆಗೆ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಬಡಲವರು ಮತ್ತು ನಿರಾಶ್ರಿತರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಮಸೂದೆಯ ಪ್ರಕಾರ ಮಾನಸಿಕ ಅಸ್ವಸ್ತರ ಆತ್ಮಹತ್ಯೆಗೆ ಯತ್ನ ಅಪರಾಧವೆನಿಸುವುದಿಲ್ಲ. ಒತ್ತಡದಿಂದ ಈ ನಿರ್ಧಾರ ಕೈಗೊಂಡಿದ್ದಾರೆಂದು ಪರಿಗಣಿಸಿ ಐಪಿಸಿ ಸೆಕ್ಷನ್ 309ರ ಅಡಿ ಶಿಕ್ಷೆ ನೀಡಲಾಗುವುದಿಲ್ಲ. ಅಲ್ಲದೆ, ಮಹಿಳಾ ರೋಗಿಗಳಿಗೆ ವಿಶೇಷ ಚಿಕಿತ್ಸಾ ಸೌಲಭ್ಯಕ್ಕೂ ಮಸೂದೆ ಅವಕಾಶ ಕಲ್ಪಿಸುತ್ತದೆ ಎಂದು ಕೇಂದ್ರ ಆರೋಗ್ಯ ಖಾತೆ ಸಚಿವ ಜೆ.ಪಿ. ನಡ್ಡಾ ಅವರು ಲೋಕಸಭೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


