ಟ್ವೀಟರ್ ನಲ್ಲಿ ಡಿಜಿಪಿ ಟೀಕಿಸಿದ ಉತ್ತರ ಪ್ರದೇಶ ಐಪಿಎಸ್ ಅಧಿಕಾರಿ ಅಮಾನತು
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಮಹಾ ನಿರ್ದೇಶಕರು....

Published On :
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಮಹಾ ನಿರ್ದೇಶಕರು ಅಧಿಕಾರಿಗಳ ಮಧ್ಯ ಜಾತಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ 2010ರ ಬ್ಯಾಚಿನ ಐಪಿಎಸ್ ಅಧಿಕಾರಿ ಹಿಮಾಂಶು ಕುಮಾರ್ ಅವರನ್ನು ಉತ್ತರ ಪ್ರದೇಶ ಸರ್ಕಾರ ಶನಿವಾರ ಅಮಾನತುಗೊಳಿಸಿದೆ.
ಕೆಲವು ದಿನಗಳ ಹಿಂದೆ ಹಿಮಾಂಶು ಕುಮಾರ್ ಅವರು, ಡಿಜಿಪಿ ಜಾತಿ ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮತ್ತು ಅಮಾನತುಗೊಳಿಸುತ್ತಿದ್ದಾರೆ. ಅಲ್ಲದೆ ಯಾದವ್ ಸರ್‌ನೇಮ್ ಹೊಂದಿರುವ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ ಕೊಟ್ಟು ಸತಾಯಿಸುತ್ತಿದ್ದಾರೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟೀಕಿಸಿದ್ದರು. ಈ ವಿವಾದಾತ್ಮಕ ಟ್ವೀಟ್ ವೈರಲ್ ಆಗುತ್ತಲೇ ಅವರು ಅದನ್ನು ತೆಗೆದುಹಾಕಿದ್ದರು. ಇದೀಗ ಶಿಸ್ತು ಕ್ರಮದ ಅಂಗವಾಗಿ ಹಿಮಾಂಶು ಅವರನ್ನು ಸಸ್ಪೆಂಡ್ ಮಾಡಲಾಗಿದ್ದು ಉತ್ತರಪ್ರದೇಶ ಪೊಲೀಸ್ ದಳ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಕಳೆದ ಮಾರ್ಚ್ 22ರಂದು ಹಿಮಾಂಶು ಅವರು ಮಾಡಿದ್ದ ಟ್ವೀಟ್ ಹೀಗಿತ್ತು, ಯಾದವ್ ಸರ್‌ನೇಮ್ ಹೊಂದಿರುವ ಎಲ್ಲ ಪೊಲೀಸ್ ಸಿಬಂದಿಗಳನ್ನು ಸಸ್ಪೆಂಡ್ ಮಾಡುವಲ್ಲಿ ಇಲ್ಲವೇ ರಿಸರ್ವ್ ಲೈನ್ಸ್‌ಗೆ ಕಳುಹಿಸುವಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಭರದಿಂದ ನಿರತರಾಗಿದ್ದಾರೆ'. ಮತ್ತೊಂದು ಟ್ವೀಟ್‌ನಲ್ಲಿ ಹಿಮಾಂಶು ಅವರು "ಜಾತಿ ಹೆಸರಿನಲ್ಲಿ ಜನರನ್ನು ಶಿಕ್ಷಿಸುವುದಕ್ಕೆ ಡಿಜಿಪಿ ಕಾರ್ಯಾಲಯದ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ' ಎಂದು ಹೇಳಿದ್ದರು.
ಈ ಎರಡೂ ಟ್ವೀಟ್‌ಗಳ ಬಳಿಕ ಹಿಮಾಂಶು ಅವರು, "ನನ್ನ ಟ್ವೀಟ್‌ನ್ನು ಕೆಲ ಜನರು ಅಪಾರ್ಥ ಮಾಡಿಕೊಂಡಿದ್ದಾರೆ; ನಾನು ಸರಕಾರದ ಕ್ರಮವನ್ನು ಬೆಂಬಲಿಸುತ್ತೇನೆ' ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


