ಕಸಾಯಿ ಖಾನೆಗೆ ಬೀಗ; ಇದೇ ಮೊದಲ ಬಾರಿಗೆ ತುಂಡೇ ಕಬಾಬಿಯಲ್ಲಿ ಚಿಕನ್, ಮಟನ್!
ಯೋಗಿ ಆದಿತ್ಯಾನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಕಾಸಾಯಿ ಖಾನೆಗಳಿಗೆ ಬೀಗ ಹಾಕಿದ ಪರಿಣಾಮ, ಲಖನೌನ ಖ್ಯಾತ ತುಂಡೇ ಕಬಾಬಿಯಲ್ಲಿ ಇದೇ ಮೊದಲ ಬಾರಿಗೆ ಚಿಕನ್, ಮಟನ್ ಖಾದ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ಲಖನೌ: ಯೋಗಿ ಆದಿತ್ಯಾನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಕಾಸಾಯಿ ಖಾನೆಗಳಿಗೆ ಬೀಗ ಹಾಕಿದ ಪರಿಣಾಮ, ಲಖನೌನ ಖ್ಯಾತ ತುಂಡೇ ಕಬಾಬಿಯಲ್ಲಿ ಇದೇ ಮೊದಲ ಬಾರಿಗೆ ಚಿಕನ್, ಮಟನ್ ಖಾದ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.
ಬೀಫ್ ಕಬಾಬ್ ಮತ್ತು ಭೀಫ್ ಖಾಧ್ಯಗಳಿಗಾಗಿ ಖ್ಯಾತಿಗಳಿಸಿದ್ದ ಲಖನೌನ ತುಂಡೇ ಕಬಾಬಿಯಲ್ಲಿ ಇದೇ ಮೊದಲ ಬಾರಿಗೆ ಚಿಕನ್ ಮತ್ತು ಮಟನ್ ಖಾದ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಶತಮಾನಗಳಷ್ಟು ಇತಿಹಾಸ ಹೊಂದಿರುವ ತುಂಡೇ ಕಬಾಬಿ ಈ ಹಿಂದೆ ಎಮ್ಮೆ ಮಾಂಸ ಸಿಗದೆ ಕೆಲ ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದ ಇಲ್ಲಿನ ಗ್ರಾಹಕರು ಕಂಗಾಲಾಗಿದ್ದರು. ಆದರೆ ಇದೀಗ ಮತ್ತೆ ತುಂಡೇ ಕಬಾಬಿ ಆರಂಭವಾಗಿದೆಯಾದರೂ ಗ್ರಾಹಕರು ಮಾತ್ರ ತೃಪ್ತರಾಗಿಲ್ಲ. ಕಾರಣ ಇಲ್ಲಿ ಇದೀಗ ಬೀಫ್ ಖಾದ್ಯಗಳನ್ನು ತಯಾರಿಸುತ್ತಿಲ್ಲ. ಬದಲಿಗೆ ಚಿಕನ್ ಮತ್ತು ಮಟನ್ ಮಾಂಸಹಾರದ ಖಾದ್ಯಗಳನ್ನಷ್ಟೇ ಗ್ರಾಹಕರಿಗೆ ನೀಡಲಾಗುತ್ತಿದೆ.
1905ರಲ್ಲಿ ಹಾಜಿ ಮುರದ್ ಅಲಿ ಎಂಬುವವರು ಈ ತುಂಡೇ ಕಬಾಬಿಯನ್ನು ಆರಂಭಿಸಿದ್ದರಂತೆ. ಉತ್ತರ ಪ್ರದೇಶ ರಾಜಧಾನಿ ಲಖೌನ ಅವಧ್ ನಲ್ಲಿ ಈ ತುಂಡೇ ಕಬಾಬಿ ಕೇಂದ್ರವಿದ್ದು, ಇಲ್ಲಿ ನಿತ್ಯ ಸುಮಾರು 160ಕ್ಕೂ ಹೆಚ್ಚು ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿತ್ತು. ವಿಶ್ವಾದ್ಯಂತ ಈ ತುಂಡೇ ಕಬಾಬಿಗೆ ಹಲವು ಗ್ರಾಹಕರಿದ್ದಾರೆ ಎಂದು ತುಂಡೇ ಕಬಾಬಿ ನಿರ್ವಾಹಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


