ಭಾರತಕ್ಕೆ ಬಂದಿಳಿದ ನಾಪತ್ತೆಯಾಗಿದ್ದ ಮುಸ್ಲಿಂ ಮೌಲ್ವಿಗಳು
ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಇಬ್ಬರು ಮುಸ್ಲಿಂ ಮೌಲ್ವಿಗಳು ಸೋಮವಾರ ಭಾರತಕ್ಕೆ ಬಂದಿಳಿದಿದ್ದಾರೆ...

Published On :
ನವದೆಹಲಿ: ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಇಬ್ಬರು ಮುಸ್ಲಿಂ ಮೌಲ್ವಿಗಳು ಸೋಮವಾರ ಭಾರತಕ್ಕೆ ಬಂದಿಳಿದಿದ್ದಾರೆ.
ಹಝ್ರತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೈಯದ್ ಅಸಿಫ್ ನಿಜಾಮಿ ಮತ್ತು ಅವರ ಸೋದರಳಿಯ ನಜೀಮ್ ಅಲಿ ನಿಜಾಮಿ ಅವರು ಇಂದು ಬೆಳಿಗ್ಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಲಾಹೋರ್ ನಲ್ಲಿರುವ ಪ್ರಸಿದ್ಧ ದಾತ ದರ್ಬಾರ್ ದರ್ಗಾಕ್ಕೆ ಭೇಟಿನೀಡುವ ಸಲುವಾಗಿ ದೆಹಲಿಯ ಹಝ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಸೂಫಿ ಧರ್ಮಗುರುಗಳು ಪಾಕಿಸ್ತಾನಕ್ಕೆ ಹೋಗಿದ್ದರು. ದರ್ಗಾದ ಮುಖ್ಯ ಧರ್ಮಗುರು ಆಸೀಫ್ ನಿಜಾಮಿ ಮತ್ತು ನಝೀಮ್ ನಿಜಾಮಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.
ಲಾಹೋರ್ ನಿಂದ ಕರಾಚಿಗೆ ಇಬ್ಬರು ಧರ್ಮಗುರುಗಳು ವಿಮಾನ ಹಿಡಿಯಬೇಕಾಗಿತ್ತು. ಆಸೀಫ್ ಗೆ ಕರಾಚಿಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ, ಪ್ರಯಾಣ ದಾಖಲೆಯಲ್ಲಿನ ತಪ್ಪುಗಳಿಂದಾಗಿ ನಝೀಮ್ ಅವರನ್ನು ಲಾಹೋರ್ ನಲ್ಲಿಯೇ ತಡೆಯಲಾಗಿತ್ತು. ನಝೀಮ್ ಲಾಹೋರ್ ವಿಮಾನ ನಿಲ್ದಾಣದಿಂದ, ಆಸೀಫ್ ಕರಾಚಿಯಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿತ್ತು.
ಈ ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ನಾಪತ್ತೆಯಾಗಿರುವ ಮೌಲ್ವಿಗಳು ಇಸಿಸ್ ವಶದಲ್ಲಿದ್ದಾರೆಂದು ಶಂಕಿಸಲಾಗಿತ್ತು. ನಿನ್ನೆಯಷ್ಟೇ ಸುಷ್ಮಾ ಸ್ವರಾಜ್ ಅವರು ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ್ದರು. ಇಬ್ಬರೂ ಮೌಲ್ವಿಗಳು ಸುರಕ್ಷಿತರಾಗಿದ್ದು, ಶೀಘ್ರದಲ್ಲಿಯೇ ಭಾರತಕ್ಕೆ ಬರುತ್ತಾರೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


