ಅಟಾರ್ನಿ ಜನರಲ್ ರಾಜೀನಾಮೆಗೆ ಕೇರಳ ಕಾಂಗ್ರೆಸ್ ಒತ್ತಾಯ
ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ರಾಜೀನಾಮೆ ನೀಡಬೇಕೆಂದು ಕೇರಳ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

Published On :
ತಿರುವನಂತಪುರಂ: ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ರಾಜೀನಾಮೆ ನೀಡಬೇಕೆಂದು ಕೇರಳ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಕೆಲವು ಬಾರ್ ಹೋಟೆಲ್ ಮಾಲಿಕರ ಪರವಾಗಿ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಅಟಾರ್ನಿ ಜನರಲ್ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿಎಂ ಸುಧೀರನ್ ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮದ್ಯವನ್ನೂ ಮಾರಾಟ ಮಾಡಬಾರದು ಎಂದು ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ರೋಹಟ್ಗಿ ಮಾತ್ರ ಕೇರಳ ಸರ್ಕಾರಕ್ಕೆ ಮದ್ಯ ಮಾರಾಟ ಮಾಡುವ ಚಿಲ್ಲರೆ ಮಳಿಗೆಗಳನ್ನು ಮಾತ್ರ ತೆರವುಗೊಳಿಸಬೇಕು ಬಾರ್ ಹೋಟೆಲ್ ಗಳು ಹಾಗೂ ಬೀರ್-ವೈನ್ ಅಂಗಡಿಗಳು ಹೆದ್ದಾರಿಯಲ್ಲಿರಬಹುದೆಂದು ಹೇಳಿದ್ದರು.
ಮುಕುಲ್ ರೋಹಟ್ಗಿಯವರ ಈ ಹೇಳಿಕೆಯೇ ಅವರು ಕೆಲವು ಬಾರ್ ಹೋಟೆಲ್ ಗಳ ಮಾಲಿಕರ ಪರವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಹಿಂದಿನ ಕೇರಳ ಸರ್ಕಾರದ ಮದ್ಯ ನೀತಿಗೆ ವಿರುದ್ಧವಾಗಿ ಬಾರ್ ಹೋಟೆಲ್ ಮಾಲಿಕರ ಪರವಾಗಿ ಮುಕುಲ್ ರೋಹಟ್ಗಿ ಕೆಲಸ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕೆಂದು ವಿಎಂ ಸುಧೀರನ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Resignationರಾಜೀನಾಮೆಅಟಾರ್ನಿ ಜನರಲ್Attorney General Mukul RohatgiKerala Congressಮುಕುಲ್ ರೋಹಟ್ಗಿಕೇರಳ ಕಾಂಗ್ರೆಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


