ದೇಶ

ಸರ್ಕಾರದ ಶಕ್ತಿಗಿಂತ ಜನಶಕ್ತಿ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ

ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರ್ಕಾರ...

ಸರ್ಕಾರದ ಶಕ್ತಿಗಿಂತ ಜನಶಕ್ತಿ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Published On :
ನವದೆಹಲಿ: ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರ್ಕಾರದ ಶಕ್ತಿಗಿಂತ ಜನಶಕ್ತಿ ಹೆಚ್ಚು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿಯಂತೆ ದೇಶದ ಅಭಿವೃದ್ಧಿಗೆ ಚಳವಳಿ ನಮ್ಮಲ್ಲಿ ಅಗತ್ಯವಿದೆ. ಇಲ್ಲಿ ಸಾಮೂಹಿಕ ಆಕಾಂಕ್ಷೆಗಳು ದೇಶದ ಬೆಳವಣಿಗೆ ಸಹಕರಿಸುತ್ತದೆ ಎಂದು ಹೇಳಿದರು. ಪ್ರಧಾನಿ ಮೋದಿ ಮುಂಬೈಯಲ್ಲಿ ನಡೆದ ಇಂಡಿಯಾ ಟುಡೇ ಸಮಾರಂಭದಲ್ಲಿ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. 

ನವಭಾರತ ಅವಕಾಶದ ಸುತ್ತಮುತ್ತವಾಗಿದಿಯೇ ಹೊರತು ಪರವಾಗಿ ಅಲ್ಲ ಎಂದು ಅಭಿಪ್ರಾಯಪಟ್ಟರು. ತಂತ್ರಜ್ಞಾನದಿಂದ ಬಹಳ ಬದಲಾವಣೆಯಾಗಿದೆ. ಯುವ ಸಮುದಾಯದ ಆಕಾಂಕ್ಷೆಗಳಿಗೆ ಹೆಜ್ಜೆ ಇರಿಸಬೇಕು. ಹಿಂದೆ ನಿರ್ಧಾರ ತೆಗೆದುಕೊಳ್ಳುವುದು ಚುನಾವಣಾ ನಿರ್ಧಾರವಾಗುತ್ತಿತ್ತು ಅಥವಾ ಅಧಿಕಾರಿಗಳ ಕಲ್ಪನೆಗಳನ್ನು ಆಧರಿಸುತಿತ್ತು. ಆದರೆ ಈಗ ಅದು ಬದಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಪ್ರಕ್ರಿಯೆಗಳು ನಾಗರಿಕ ಸ್ನೇಹಿಯಾಗಿದ್ದು, ನಿಗದಿತ ಕಾಲಾವಧಿಯಲ್ಲಿ ಅದನ್ನು ಜಾರಿಗೆ ತರುವ ಬಗ್ಗೆ ಮತ್ತು ಸಮಗ್ರ ಚಿಂತನೆಗೆ ಒತ್ತು ನೀಡುತ್ತದೆ ಎಂದರು.

ಕೇಂದ್ರ ಸರ್ಕಾರ ವಿವಿಧ ವಲಯಗಳಲ್ಲಿ ತೆಗೆದುಕೊಂಡಿರುವ ಅಭಿಯಾನಗಳನ್ನು ಉಲ್ಲೇಖಿಸಿದ ಅವರು, ಭಾರತದ ಆರ್ಥಿಕತೆ ರೂಪಾಂತರಗೊಂಡಿದ್ದು, ಉತ್ಪಾದಕ ವಲಯಕ್ಕೆ ಬಲವಾದ ಪ್ರಚೋದನೆ ಸಿಗುತ್ತಿದೆ. ಗ್ರಾಮೀಣ  ಪ್ರದೇಶಗಳನ್ನು ಸಂಪೂರ್ಣ ವಿದ್ಯುದ್ಧೀಕರಣಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರೈಲ್ವೆ ಹಾಗೂ ಇತರ ಸಾರಿಗೆ ವಲಯಗಳ ವೇಗವಾದ ಅಭಿವೃದ್ಧಿಗೆ ಈ ವರ್ಷ ರೈಲ್ವೆ ಬಜೆಟ್ ನ್ನು ಸಾಮಾನ್ಯ ಬಜೆಟ್ ನೊಂದಿಗೆ ಸೇರಿಸಿದ್ದೇವೆ. ರೈಲ್ವೆ ವಲಯದಲ್ಲಿನ ವೇಗದ ಕೆಲಸ ಮತ್ತು ರಸ್ತೆ ವಲಯಗಳ ಬೆಳವಣಿಗೆಯನ್ನು  ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.