ದೇಶ

ದಾಖಲೆ ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ": ಜಯಲಲಿತಾ "ಸ್ವಯಂ ಘೋಷಿತ ಪುತ್ರ"ನಿಗೆ ಮದ್ರಾಸ್ ಹೈ ಛಾಟಿ

ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಮಗ ಎಂದು ಘೋಷಿಸಿಕೊಂಡಿದ್ದ ಜೆ ಕೃಷ್ಣ ಮೂರ್ತಿ ಎಂಬಾತನಿಗೆ ಮದ್ರಾಸ್ ಹೈಕೋರ್ಟ್ ಛಾಟಿ ಬೀಸಿದ್ದು, ನೀವು ಸಲ್ಲಿಸಿರುವ ದಾಖಲೆಗಳು ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ ಎಂದು ಕಿಡಿಕಾರಿದ್ದಾರೆ.

ದಾಖಲೆ ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ": ಜಯಲಲಿತಾ "ಸ್ವಯಂ ಘೋಷಿತ ಪುತ್ರ"ನಿಗೆ ಮದ್ರಾಸ್ ಹೈ ಛಾಟಿ
ಜಯಲಲಿತಾ ಹಾಗೂ ಶೋಭನ್ ಬಾಬು ಮತ್ತು ಸ್ವಯಂಘೋಷಿತ ಮಗ
Published On :

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಮಗ ಎಂದು ಘೋಷಿಸಿಕೊಂಡಿದ್ದ ಜೆ ಕೃಷ್ಣ ಮೂರ್ತಿ ಎಂಬಾತನಿಗೆ ಮದ್ರಾಸ್ ಹೈಕೋರ್ಟ್ ಛಾಟಿ ಬೀಸಿದ್ದು, ನೀವು ಸಲ್ಲಿಸಿರುವ ದಾಖಲೆಗಳು ಸುಳ್ಳಾದರೆ  ನಿನ್ನನ್ನು ಜೈಲಿಗಟ್ಟುತ್ತೇವೆ ಎಂದು ಕಿಡಿಕಾರಿದ್ದಾರೆ.

ಪ್ರಕರಣ ಸಂಬಂಧ ನಿನ್ನೆ ನಡೆದ ವಿಚಾರಣೆಯಲ್ಲಿ ಅರ್ಜಿದಾರ ಹಾಗೂ ಜಯಲಲಿತಾ ಅವರ "ಸ್ವಯಂಘೋಷಿತ ಮಗ" ಜೆ ಕೃಷ್ಣಮೂರ್ತಿ, ತಾನು ತೆಲುಗು ಸೂಪರ್ ಸ್ಟಾರ್ ಶೋಭನ್ ಬಾಬು ಹಾಗೂ ಜಯಲಲಿತಾ ದಂಪತಿಗೆ  ಜನಿಸದವನಾಗಿದ್ದೇನೆ. ನನ್ನನ್ನು ವಸಂತಮಣಿ ಎಂಬ ಮಹಿಳೆಗೆ ದತ್ತು ನೀಡಲಾಗಿತ್ತು. 1986ರಲ್ಲಿ ಈರೋಡ್ ನಲ್ಲಿ ಜಯಲಲಿತಾ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ವಸಂತಮಣಿ ಅವರು ಜಯಲಲಿತಾ ಅವರಿಗೆ  ಪರಿಚಿತರಾಗಿದ್ದರು ಎಂದು ಹೇಳಿದ್ದಾನೆ. ಅಂತೆಯೇ ವಸಂತ ಮಣಿ ಅವರ ಕೃಷ್ಣಮೂರ್ತಿಯನ್ನು ದತ್ತು ಪಡೆದಿರುವ ದಾಖಲೆಯನ್ನು ಕೂಡ ಕೃಷ್ಣಮೂರ್ತಿ ಸಲ್ಲಿಸಿದ್ದು, ದಾಖಲೆಗೆ ಜಯಲಲಿತಾ ಅವರ ಅಂದಿನ ಮೆಂಟರ್ ಆಗಿದ್ದ ಎಂಜಿ  ರಾಮಚಂದ್ರನ್ ಅವರು ಸಹಿ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಅಂತೆಯೇ ಜಯಲಲಿತಾ ಅವರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿಯಾಗಲು ಹಲವು ಬಾರಿ ಯತ್ನಿಸಿದ್ದೆ, ಆದರೆ ಶಶಿಕಲಾ ಅವರಿಂದಾಗಿ ನಾನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ಸೆಪ್ಟೆಂಬರ್ ನಲ್ಲೇ ಈ  ವಿಚಾರವನ್ನು ಬಹಿರಂಗ ಪಡಿಸಲು ಯತ್ನಿಸಿದ್ದೆ. ಅದಕ್ಕೂ ಶಶಿಕಲಾ ಅಡ್ಡಿಯಾಗಿದ್ದರು ಎಂದು ಕೃಷ್ಣಮೂರ್ತಿ ಆರೋಪಿಸಿದ್ದಾನೆ.

ಇನ್ನು ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋಟ್ ನ್ಯಾಯಮೂರ್ತಿ ಆರ್ ಮಹದೇವನ್ ಅವರು, ಕೂಡಲೇ ದಾಖಲೆ ಸಮೇತರಾಗಿ ಚೆನ್ನೈ ಪೊಲೀಸ್ ಆಯುಕ್ತರನ್ನು ಭೇಟಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.  ಅಂತೆಯೇ ದಾಖಲೆಗಳ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳು, ಈ ದಾಖಲೆಗಳನ್ನು ಎಲ್ ಕೆಜಿ ಮಕ್ಕಳು ನೋಡಿದರೂ ಸಹ ಇದರ ಬಗ್ಗೆ ಅನುಮಾನ ಮೂಡುತ್ತದೆ. ಇನ್ನು ನೀನು ದಾಖಲೆಗಳಲ್ಲಿ ಸಲ್ಲಿಕೆ ಮಾಡಿರುವ ಫೋಟೋ  ಈಗಾಗಲೇ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನ್ಯಾಯಾಲಯವನ್ನು ಇಷ್ಟು ಸುಲಭವಾಗಿ ಮೂರ್ಖರನ್ನಾಗಿ ಮಾಡಲು ಸಾಧ್ಯ ಎಂದು ನೀನು ತಿಳಿದರೆ ಅದು ತಪ್ಪು. ನ್ಯಾಯಾಲಯದ ಸಮಯದೊಂದಿಗೆ ಆಟವಾಡಬೇಡ.  ನಿನ್ನ ದಾಖಲೆಗಳು ಸುಳ್ಳು ಎಂದು ಸಾಬೀತಾದರೆ ನಿನನ್ನು ಜೈಲಿಗಟ್ಟುತ್ತೇನೆ ಎಂದು ನ್ಯಾಯಾಧೀಶರು ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.