ಗೋವಾ ಸರ್ಕಾರ ರಚನೆ: ಬಿಜೆಪಿಗೆ ಮಾ.16 ಕ್ಕೆ ಬಹುಮತ ಸಾಬೀತುಪಡಿಸಲು 'ಸುಪ್ರೀಂ' ಸೂಚನೆ
ಗೋವಾ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತೀವ್ರ ಕುತೂಹಲ ಮೂಡಿಸಿದ್ದ ಸುಪ್ರೀಂ ಕೋರ್ಟ್ ನ ಆದೇಶ ಪ್ರಕಟವಾಗಿದ್ದು, ಸರ್ಕಾರ ರಚನೆಯಾದ ತಕ್ಷಣವೇ ಸದನದಲ್ಲಿ ಬಹುಮತ ಸಬೀತು ಪಡಿಸುವಂತೆ ಸೂಚನೆ

Published On :
ನವದೆಹಲಿ: ಗೋವಾ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತೀವ್ರ ಕುತೂಹಲ ಮೂಡಿಸಿದ್ದ ಸುಪ್ರೀಂ ಕೋರ್ಟ್ ನ ಆದೇಶ ಪ್ರಕಟವಾಗಿದ್ದು, ಸರ್ಕಾರ ರಚನೆಯಾದ ಮಾ.16 ರಂದು ಸದನದಲ್ಲಿ ಬಹುಮತ ಸಬೀತು ಪಡಿಸುವಂತೆ ಸೂಚನೆ ನೀಡಿದೆ.
ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸರ್ಕಾರ ರಚನೆಗೆ ತಡೆ ನೀಡುವುದಕ್ಕೆ ನಿರಾಕರಿಸಿದ್ದು, ಸದನದ ಅತಿ ಹಿರಿಯ ಶಾಸಕರು ತತ್ಕಾಲಿಕ ಸಭಾಧ್ಯಕ್ಷರಾಗಬೇಕು ಹಾಗೂ ಮಾ.16 ರಂದು ನಿಯೋಜಿತ ಸಿಎಂ ಮನೋಹರ್ ಪರಿಕ್ಕರ್ ಬಹುಮತ ಸಾಬೀತು ಪಡಿಸಬೇಕೆಂದು ಮಹತ್ವದ ಆದೇಶ ನೀಡಿದೆ.
ಇನ್ನು ಕಾಂಗ್ರೆಸ್ ಸಹ ಸರ್ಕಾರ ರಚಿಸಲು ಶತ ಪ್ರಯತ್ನ ನಡೆಸುತ್ತಿದ್ದು, ಶಾಸಕಾಂಗ ಪಕ್ಷದ ಸಭೆಯ ನಂತರ ಕಾಂಗ್ರೆಸ್ ನ ಶಾಸಕರು ಮಧ್ಯಾಹ್ನ 1:30 ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಎರಡನೇ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಲು ಮೊದಲು ಅವಕಾಶ ನೀಡಲಾಗಿರುವುದನ್ನು ವಿರೋಧಿಸಿದ್ದ ಕಾಂಗ್ರೆಸ್ ಕಾಂಗ್ರೆಸ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಕಾಂಗ್ರೆಸ್ ಗೆ ಸರ್ಕಾರ ರಚನೆಗೆ ಅವಕಾಶ ನೀಡಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಮನೋಹರ್ ಪರಿಕ್ಕರ್bjpಬಿಜೆಪಿಸುಪ್ರೀಂ ಕೋರ್ಟ್floor testGoa government formationಗೋವಾ ಸರ್ಕಾರ ರಚನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


