ದೇಶ

ಉತ್ತರ ಪ್ರದೇಶ ಚುನಾವಣೆ: 69 ರಿಂದ 24ಕ್ಕೆ ಕುಸಿದ ಮುಸ್ಲಿಂ ಶಾಸಕರ ಸಂಖ್ಯೆ

ಉತ್ತರ ಪ್ರದೇಶದಲ್ಲಿ ಶೇ.19ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯೆ ಈ ಬಾರಿ ವಿಧಾನಸಭೆಯಲ್ಲಿ...

ಉತ್ತರ ಪ್ರದೇಶ ಚುನಾವಣೆ: 69 ರಿಂದ 24ಕ್ಕೆ ಕುಸಿದ ಮುಸ್ಲಿಂ ಶಾಸಕರ ಸಂಖ್ಯೆ
ಲಖನೌನಲ್ಲಿ ಮುಸ್ಲಿಂ ಬಿಜೆಪಿ ಬೆಂಬಲಿಗರ ವಿಜಯೋತ್ಸವ
Published On :
ಲಖನೌ: ಉತ್ತರ ಪ್ರದೇಶದಲ್ಲಿ ಶೇ.19ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯೆ ಈ ಬಾರಿ ವಿಧಾನಸಭೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 69ರಿಂದ 24ಕ್ಕೆ ಕುಸಿದಿದೆ.
2012ರ ಚುನಾವಣೆಯಲ್ಲಿ ಒಟ್ಟು 69 ಅಲ್ಪ ಸಂಖ್ಯಾತ ಶಾಸಕರು ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಕೇವಲ 24 ಶಾಸಕರು ಮಾತ್ರ ವಿಧಾನಸಭೆ ಪ್ರವೇಶಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂರು ನಿರ್ಣಾಯಕ ಮತಗಳನ್ನು ಹೊಂದಿದ್ದರೂ ಈ ಬಾರಿ ಬಿಜೆಪಿ 403 ಸ್ಥಾನಗಳ ಪೈಕಿ ಯಾರೊಬ್ಬರಿಗೆ ಟಿಕೆಟ್ ನೀಡಿರಲಿಲ್ಲ. ಪಶ್ಚಿಮ ಉತ್ತರ ಪ್ರದೇಷ ರೋಹಿಖಾಂಡ್, ತೆರೈ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮುಸ್ಲಿಮರ, ಯಾದವ್ ಮತ್ತು ದಲಿತರ ಪ್ರಭಾವ ಹೆಚ್ಚಾಗಿದೆ. ಆದರೂ ಸಮಾಜವಾದಿ ಪಕ್ಷ, ಕಾಂಗ್ರೆಸ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಲೆಕ್ಕಾಚಾರ ಈ ಬಾರಿ ತಲೆಕೆಳಗಾಗಿದ್ದು, ಈ ಪಕ್ಷಗಳ ನಡುವೆಯೇ ಮುಸ್ಲಿಂ ಮತಗಳು ವಿಭಜನೆಯಾಗಿದ್ದರಿಂದ ಬಿಜೆಪಿ ಲಾಭವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.