ಉತ್ತರಪ್ರದೇಶ: ಅಪ್ರಾಪ್ತ ಅಂಗವಿಕಲೆಯ ಮೇಲೆ ಸಾಮೂಹಿಕ ಅತ್ಯಾಚಾರ!
ಉತ್ತರಪ್ರದೇಶದ ಮಥುರಾದಲ್ಲಿ ಅಪ್ರಾಪ್ತ ಅಂಗವಿಕಲ ಬಾಲಕಿಯೊಬ್ಬಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆಯೊಂದು ಶನಿವಾರ ಬೆಳಕಿಗೆ ಬಂದಿದೆ...

Published On :
ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿ ಅಪ್ರಾಪ್ತ ಅಂಗವಿಕಲ ಬಾಲಕಿಯೊಬ್ಬಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆಯೊಂದು ಶನಿವಾರ ಬೆಳಕಿಗೆ ಬಂದಿದೆ.
ಮಥುರಾದ ನಗರವೊಂದರಲ್ಲಿ ಅಣ್ಣ ಮತ್ತು ತಂಗಿ ಇಬ್ಬರು ವಾಸವಿದ್ದರು. ಬಾಲಕಿ ಅಪ್ರಾಪ್ತೆಯಾಗಿದ್ದು, ಆಕೆಗೆ ಕಿವಿ ಕೇಳಿಸುತ್ತಿರಲಿಲ್ಲ ಹಾಗೂ ಮಾತು ಬರುತ್ತಿರಲಿಲ್ಲ. ಬಾಲಕಿಯ ಸಹೋದರ ಹತ್ತಿರದಲ್ಲಿಯೇ ಇರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಾಲಕಿಯ ಸಹೋದರ ಕೆಲಸಕ್ಕೆ ಹೋದ ಬಳಿಕ ಮನೆಗೆ ನುಗ್ಗಿರುವ ಇಬ್ಬರು ಕಾಮುಕರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಪ್ರಕರಣ ಸಂಬಂಧ ಬಾಲಕಿಯ ಅಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CrimeGang Rapeಸಾಮೂಹಿಕ ಅತ್ಯಾಚಾರUttar pradeshಉತ್ತರಪ್ರದೇಶಅಪರಾಧPhysically challenged minor girlಅಪ್ರಾಪ್ತ ಅಂಗವಿಕಲ ಬಾಲಕಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


