ಕಳೆದ ವರ್ಷ ಏರ್ ಇಂಡಿಯಾಗೆ 105 ಕೋಟಿ ನಿರ್ವಹಣಾ ಲಾಭವಾಗಿಲ್ಲ, ಬದಲಿಗೆ 321 ಕೋಟಿ ನಷ್ಟ: ಸಿಎಜಿ
ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 105 ಕೋಟಿ ನಿರ್ವಹಣಾ ಲಾಭ ಆಗಿದೆ ಎಂದು ಹೇಳಿಕೊಂಡಿತ್ತು. ಆದರೆ ಆಗಿದ್ದು ನಿರ್ವಹಣಾ ಲಾಭ ಬದಲಿಗೆ 321.4 ಕೋಟಿ...

Published On :
ನವದೆಹಲಿ: ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 105 ಕೋಟಿ ನಿರ್ವಹಣಾ ಲಾಭ ಆಗಿದೆ ಎಂದು ಹೇಳಿಕೊಂಡಿತ್ತು. ಆದರೆ ಆಗಿದ್ದು ನಿರ್ವಹಣಾ ಲಾಭ ಬದಲಿಗೆ 321.4 ಕೋಟಿ ನಿರ್ವಹಣಾ ನಷ್ಟವಾಗಿದೆ ಎಂದು ಪರಮೋಚ್ಛ ಲೆಕ್ಕಪತ್ರ ಪರಿಶೋಧ(ಸಿಎಜಿ) ಹೇಳಿದೆ.
ಸಿಎಜಿ ಕಾರ್ಯಾಲಯದ ಉನ್ನತ ಅಧಿಕಾರಿಗಳು ಏರ್ ಇಂಡಿಯಾ ಸಂಸ್ಥೆ ಈ ವಿಷಯದಲ್ಲಿ ಯಾವುದೇ ರೀತಿಯ ಅಂಕಿ ಸಂಖ್ಯೆಗಳನ್ನು ತಿರುಚಿಲ್ಲ, ಆದರೂ ಅದು ನೈಜ ನಷ್ಟವನ್ನು ಕಡಿಮೆ ಪ್ರಮಾಣದಲ್ಲಿ ವರದಿ ಮಾಡಿದೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಇನ್ನು ತೆರಿಗೆ ಪಾವತಿದಾರರ ಹಣದಲ್ಲೇ ಕಾರ್ಯನಿರತವಾಗಿದೆ. ದಶಕಕ್ಕೂ ಮೀರಿದ ಅವಧಿಯಲ್ಲಿ ಇದೇ ಮೊದಲ ಬಾರಿಗೆ 2015-16ರಲ್ಲಿ 105 ಕೋಟಿ ರುಪಾಯಿ ನಿರ್ವಹಣಾ ಲಾಭ ಮಾಡಿದೆ ಎಂದು ವರದಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


