ಮೀನುಗಾರರ ರಕ್ಷಣೆ ನಮ್ಮ ಕರ್ತವ್ಯ: ಮೋದಿಗೆ ತಮಿಳುನಾಡು ಸಿಎಂ ಪತ್ರ
ಮೀನುಗಾರರ ಜೀವ ಹಾಗೂ ಅವರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಅವರು ಬುಧವಾರ ಪತ್ರವನ್ನು ಬರೆದಿದ್ದಾರೆ...

Published On :
ಚೆನ್ನೈ: ಮೀನುಗಾರರ ಜೀವ ಹಾಗೂ ಅವರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಅವರು ಬುಧವಾರ ಪತ್ರವನ್ನು ಬರೆದಿದ್ದಾರೆ.
ಭಾರತೀಯ ಮೀನುಗಾರರು ಮೀನುಗಾರನನ್ನು ಶ್ರೀಲಂಕಾ ನೌಕಾಪಡೆ ಹತ್ಯೆ ಮಾಡಿರುವುದನ್ನು ಖಂಡಿಸಿ ಪ್ರಧಾನಿ ಮೋದಿಯವರಿಗೆ ತಮಿಳುನಾಡು ಮುಖ್ಯಮಂತ್ರಿ ಪತ್ರವನ್ನು ಬರೆದಿದ್ದಾರೆ. ಮೀನುಗಾರನ ಹತ್ಯೆ ಪ್ರಕರಣವನ್ನು ಕಡೆಗಣಿಸಬಾರದು. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು ಎಂದು ಪಳನಿಸ್ವಾಮಿಯವರು ಪತ್ರದಲ್ಲಿ ಹೇಳಿದ್ದಾರೆ.
ಶ್ರೀಲಂಕಾ ನೌಕಾಪಡೆಯ ಅಮಾನವೀಯ ಮತ್ತು ಅನಾಗರೀಕ ತಂತ್ರಗಳು ಭಾರತ ಮತ್ತು ಶ್ರೀಲಂಕಾ ಸರ್ಕಾರಗಳ ರಾಜತಾಂತ್ರಿಕ ಸಭೆಗಳನ್ನು ನಿರರ್ಥಕಗೊಳಿಸುತ್ತದೆ. ಮೀನುಗಾರರ ಜೀವ ಮತ್ತು ಅವರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ಭಾರತ ಮತ್ತು ತಮಿಳುನಾಡು ಸರ್ಕಾರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಜನಸಂಧಿ ಸಮೀಪ ಭಾರತೀಯ ಮೀನುಗಾರರು ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆ ಮೀನುಗಾರರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಓರ್ವ ಮೀನುಗಾರ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಶ್ರೀಲಂಕಾ ನೌಕಾಪಡೆಯ ಈ ದೌರ್ಜನ್ಯಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ತಮಿಳುನಾಡುModiTamil Nadufishermenletterಮೀನುಗಾರರುಪತ್ರSri Lankan Navyಮೋದಿಶ್ರೀಲಂಕಾ ನೌಕಾಪಡೆಇಕೆ. ಪಳನಿಸ್ವಾಮಿEK. Palaniswami
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


