ಶ್ರೀಲಂಕಾ ನೌಕಾಪಡೆ

ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 14 ಮೀನುಗಾರರ ಬಂಧನ
ಇಂದು ಬೆಳಗಿನ ಜಾವ ಮೈಲಾಡುತುರೈನ 13 ಮೀನುಗಾರರು ಮತ್ತು ಕಡಲೂರಿನ ಒಬ್ಬರು ಮೀನುಗಾರರನ್ನು ಬಂಧಿಸಲಾಗಿದೆ.

32 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ!
ಮನ್ನಾರ್‌ನ ಉತ್ತರದ ಸಮುದ್ರ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆಯ ಸಂದರ್ಭದಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀಲಂಕಾ ನೌಕಾಪಡೆಯಿಂದ 10 ಭಾರತೀಯ ಮೀನುಗಾರರ ಬಂಧನ
ಮಂದಾರ್ ತಗ್ಗು ಪ್ರದೇಶದ ಬಳಿ ಮೀನುಗಾರರನ್ನು ಬಂಧಿಸಿ ವಿಚಾರಣೆಗಾಗಿ ಮನ್ನಾರ್ ನೌಕಾ ನೆಲೆಗೆ ಕರೆದೊಯ್ಯಲಾಗಿದೆ ಎಂದು ಮಂಡಪಂ ಮೀನುಗಾರರ ಸಂಘ ತಿಳಿಸಿದೆ.

ಅಕ್ರಮ ಮೀನುಗಾರಿಕೆ ಆರೋಪ: ತಮಿಳುನಾಡಿನ 18 ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ
ಶ್ರೀಲಂಕಾದ ಗಡಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದ ಆರೋಪದ ಮೇರೆಗೆ ಭಾರತದ ತಮಿಳುನಾಡಿನ 18 ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿದೆ.

22 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಐಎಂಬಿಎಲ್ ಉಲ್ಲಂಘಿಸಿದ ಆರೋಪದ ಮೇಲೆ ರಾಮನಾಥಪುರಂನ ಪಂಬನ್ ಪ್ರದೇಶದಿಂದ ಬಂದ ಎರಡು ದೋಣಿಗಳಲ್ಲಿದ್ದ 22 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಮುಂದಿನ ಕಾನೂನು ಕ್ರಮಗಳಿಗಾಗಿ ಬಂಧಿತ ಮೀನುಗಾರರನ್ನು ಮತ್ತು ಅವರ ವಶಪಡಿಸಿಕೊಂಡ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ.

ಲಂಕಾ ನೌಕಾಪಡೆಯಿಂದ ತಮಿಳುನಾಡಿನ 37 ಮೀನುಗಾರರ ಬಂಧನ; ಶಾಶ್ವತ ಪರಿಹಾರ ಕೋರಿ ಕೇಂದ್ರಕ್ಕೆ ಸ್ಟಾಲಿನ್ ಪತ್ರ
ಶ್ರೀಲಂಕಾ ನೌಕಾಪಡೆ, ತಮಿಳುನಾಡಿನ 37 ಮೀನುಗಾರರನ್ನು ಬಂಧಿಸಿದೆ ಮತ್ತು ಅವರ ಐದು ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ಮೀನುಗಾರಿಕಾ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಶ್ರೀಲಂಕಾದಿಂದ ಬಿಡುಗಡೆಯಾದ ಹತ್ತು ಭಾರತೀಯ ಮೀನುಗಾರರು ಚೆನ್ನೈಗೆ ಆಗಮನ
ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ಮತ್ತು ಶ್ರೀಲಂಕಾ ಸರ್ಕಾರದಿಂದ ಬಿಡುಗಡೆಯಾದ ಹತ್ತು ಭಾರತೀಯ ಮೀನುಗಾರರು ಮಂಗಳವಾರ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದರು. ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಮತ್ತು ಈ ಸಂಬಂಧ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಶ್ರೀಲಂಕಾ ನ್ಯಾಯಾಲಯ ಆದೇಶ ನೀಡಿತ್ತು.

ಅಕ್ರಮ ಮೀನುಗಾರಿಕೆ; 15 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಸಮುದ್ರದ ಗಡಿ ದಾಟಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ರಾಮೇಶ್ವರಂ ಮೂಲದ ಎರಡು ದೋಣಿಗಳಲ್ಲಿದ್ದ 15 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಈ ಎಲ್ಲಾ 15 ಮೀನುಗಾರರನ್ನು ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಶ್ರೀಲಂಕಾ ನೌಕಾಪಡೆಯಿಂದ 24 ಭಾರತೀಯ ಮೀನುಗಾರರ ಬಂಧನ
ಶ್ರೀಲಂಕಾದ ನೌಕಾಪಡೆಯು 24 ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ಅವರ ಐದು ಟ್ರಾಲರ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಮಂಗಳವಾರ ಅಧಿಕೃತ ಹೇಳಿಕೆ ತಿಳಿಸಿದೆ.

