ಭಾರತ-ನೇಪಾಳ ಜಂಟಿ ಸಮರಾಭ್ಯಾಸ 'ಸೂರ್ಯ ಕಿರಣ್ -11' ಇಂದು ಆರಂಭ
ಭಾರತ ಮತ್ತು ನೇಪಾಳ ಮಧ್ಯೆ ಸೂರ್ಯ ಕಿರಣ್- 11 ಜಂಟಿ ಮಿಲಿಟರಿ ಸಮರಾಭ್ಯಾಸ ಉತ್ತರಾಖಂಡ್ ನ ಪಿಥೋರಗಡ್...

Published On :
ಪಿಥೋರಗಡ್: ಭಾರತ ಮತ್ತು ನೇಪಾಳ ಮಧ್ಯೆ ಸೂರ್ಯ ಕಿರಣ್-11 ಜಂಟಿ ಮಿಲಿಟರಿ ಸಮರಾಭ್ಯಾಸ ಉತ್ತರಾಖಂಡ್ ನ ಪಿಥೋರಗಡ್ ಪ್ರದೇಶದಲ್ಲಿ ಇಂದು ಆರಂಭವಾಗಲಿದೆ.
ಇದು ಎರಡು ಸೇನೆಗಳ ಮಧ್ಯೆ ಬೆಟಾಲಿಯನ್ ಮಟ್ಟದ ಜಂಟಿ ಸಮರಾಭ್ಯಾಸವಾಗಿದೆ.
ಎರಡು ವಾರಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ ಎರಡೂ ಪಡೆಗಳ ಸೈನಿಕರಿಗೆ ದೀರ್ಘಕಾಲದ ಅವಧಿಯ ಬಂಡಾಯ ಕಾರ್ಯಾಚರಣೆಗಳನ್ನು ಹೇಳಿಕೊಡಲಾಗುತ್ತದೆ.
ಮಾನವೀಯ ಸಹಾಯಗಳು, ವಿಪತ್ತು ಪರಿಹಾರ ಮತ್ತು ಪರಿಸರ ಸಂರಕ್ಷಣೆ ಕುರಿತು ಸಹ ಸೈನಿಕರಿಗೆ ತರಬೇತಿ ನೀಡಲಾಗುತ್ತದೆ.
ಈ ಸಮರಾಭ್ಯಾಸ ತರಬೇತಿಯಿಂದ ಎರಡೂ ಪಡೆಗಳಿಗೆ ಅನುಕೂಲವಾಗಲಿದೆ. ಸೂರ್ಯ ಕಿರಣ ಸರಣಿ ತರಬೇತಿ ವರ್ಷಕ್ಕೆ ಎರಡು ಬಾರಿ ಭಾರತ ಅಥವಾ ನೇಪಾಳದಲ್ಲಿ ನಡೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


