ದೇಶ

ಕೋಲ್ಕತಾ: ಫ್ರೆಂಚ್ ಫ್ರೈನೊಂದಿಗೆ ಸತ್ತ ಹಲ್ಲಿಯನ್ನು ಸರ್ವ್ ಮಾಡಿದ ಮೆಕ್ ಡೊನಾಲ್ಡ್ಸ್!

ಖ್ಯಾತ ಸಿದ್ಧ ತಿನಿಸುಗಳ ಬಹುರಾಷ್ಟ್ರೀಯ ಸಂಸ್ಥೆ ಮೆಕ್ ಡೊನಾಲ್ಡ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಗರ್ಭಿಣಿ ಮಹಿಳೆ ಆರ್ಡರ್ ಮಾಡಿದ್ದ ಫ್ರೆಂಚ್ ಫ್ರೈಸ್ ನಲ್ಲಿ ಸತ್ತ ಹಲ್ಲಿ ಕಂಡುಬಂದಿರುವ ಘಟನೆ ವರದಿಯಾಗಿದೆ.

ಕೋಲ್ಕತಾ: ಫ್ರೆಂಚ್ ಫ್ರೈನೊಂದಿಗೆ ಸತ್ತ ಹಲ್ಲಿಯನ್ನು ಸರ್ವ್ ಮಾಡಿದ ಮೆಕ್ ಡೊನಾಲ್ಡ್ಸ್!
ಸಂಗ್ರಹ ಚಿತ್ರ
Published On :

ಕೋಲ್ಕತಾ: ಖ್ಯಾತ ಸಿದ್ಧ ತಿನಿಸುಗಳ ಬಹುರಾಷ್ಟ್ರೀಯ ಸಂಸ್ಥೆ ಮೆಕ್ ಡೊನಾಲ್ಡ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಗರ್ಭಿಣಿ ಮಹಿಳೆ ಆರ್ಡರ್ ಮಾಡಿದ್ದ ಫ್ರೆಂಚ್ ಫ್ರೈಸ್ ನಲ್ಲಿ ಸತ್ತ ಹಲ್ಲಿ ಕಂಡುಬಂದಿರುವ ಘಟನೆ  ವರದಿಯಾಗಿದೆ.

ಖಾಸಗಿ ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಕೋಲ್ಕತಾದ ಇಎಂಬೈಪಾಸ್ ನಲ್ಲಿರುವ ಮೆಕ್ ಡೊನಾಲ್ಡ್ ಘಟಕದಲ್ಲಿ ಈ ಸುದ್ದಿ ಕೇಳಿಬಂದಿದೆ. ಪ್ರಿಯಾಂಕಾ ಮೋಯಿತ್ರಾ ಎಂಬ ಗರ್ಭಿಣಿ ಮಹಿಳೆ ತನ್ನ ಮಕ್ಕಳೊಂದಿಗೆ  ಮೆಕ್ ಡೊನಾಲ್ಡ್ ಗೆ ಆಗಮಿಸಿದ್ದು, ಈ ವೇಳೆ ತಿನ್ನಲು ಫ್ರೆಂಚ್ ಫ್ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಸಿಬ್ಬಂದಿ ಫ್ರೆಂಚ್ ಫ್ರೈಸ್ ತಂದು ನೀಡಿದಾಗ ಮಹಿಳೆಯ ಪುತ್ರಿ ಅದರೊಳಗಿದ್ದ ಹಲ್ಲಿಯನ್ನು ಹೊರ ತೆಗೆದಿದ್ದಾಳೆ. ಹಲ್ಲಿ ಫ್ರೆಂಚ್ ಫ್ರೈಸ್  ನೊಂದಿಗೆ ಫ್ರೈಯಾಗಿದ್ದು, ಇದನ್ನು ಕಂಡ ಗರ್ಭಿಣಿ ಮಹಿಳೆ ಆಘಾತಕ್ಕೊಳಗಾಗಿ ಕೆಲ ಕ್ಷಣ ಪ್ರಜ್ಞೆ ಕಳೆದುಕೊಂಡಿದ್ದರಂತೆ. ಅಷ್ಟು ಹೊತ್ತಿಗಾಗಲೇ ಮಹಿಳೆ ಒಂದೆರಡು ತುಂಡು ಫ್ರೆಂಚ್ ಫ್ರೈ ಅನ್ನು ಸೇವಿಸಿದ್ದರಂತೆ. ಬಳಿಕ ಸುತ್ತಮುತ್ತಲಿನ ಜನ ಮಹಿಳೆ ನೆರವಿಗೆ ಧಾವಿಸಿ ಆಕೆಯನ್ನು ಎಬ್ಬಿಸಿದ್ದಾರೆ.

ಕೂಡಲೇ ಆಕೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸ್ಟೋರ್ ಮ್ಯಾನೇಜರ್ ಗೆ ದೂರು ಕೂಡ ನೀಡಿದ್ದಾರೆ. ಆದರೆ ಮ್ಯಾನೇಜರ್ ನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಆಕೆ ಅದರ ಫೋಟೋ ತೆಗೆದು  ಫುಲ್ಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಸ್ತುತ ಮಹಿಳೆ ದೂರಿನ ಅನ್ವಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೆಹಲಿಯಲ್ಲಿರುವ ಮೆಕ್ ಡೊನಾಲ್ಡ್ ಆಡಳಿತಾಧಿಕಾರಿ ರಾಜಾಮಣಿ ಅವರು, ಘಟನೆಯನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಈ ಬಗ್ಗೆ ತನಿಖೆಗೆ  ಆದೇಶಿಸುತ್ತೇವೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.