ದೇಶ

ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ; ಗುರ್ಮೆಹರ್ ಕೌರ್ ಸ್ಪಷ್ಟನೆ

ರಾಜಕೀಯ ಪ್ರವೇಶಿಸುವ ಬಗ್ಗೆ ನನಗೆ ಎಳ್ಳಷ್ಟು ಆಸಕ್ತಿಯಿಲ್ಲ ಎಂದು ರಾಮ್ಜಾಸ್ ಕಾಲೇಜು ಘರ್ಷಣೆ ಪ್ರಕರಣ ಸಂಬಂಧ ಎಬಿವಿಪಿ ವಿರುದ್ಧ ಸಿಡಿದೆದ್ದಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರು ಗುರುವಾರ ಹೇಳಿದ್ದಾರೆ...

ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ; ಗುರ್ಮೆಹರ್ ಕೌರ್ ಸ್ಪಷ್ಟನೆ
ಗುರ್ಮೆಹರ್ ಕೌರ್
Published On :
ನವದೆಹಲಿ: ರಾಜಕೀಯ ಪ್ರವೇಶಿಸುವ ಬಗ್ಗೆ ನನಗೆ ಎಳ್ಳಷ್ಟು ಆಸಕ್ತಿಯಿಲ್ಲ ಎಂದು ರಾಮ್ಜಾಸ್ ಕಾಲೇಜು ಘರ್ಷಣೆ ಪ್ರಕರಣ ಸಂಬಂಧ ಎಬಿವಿಪಿ ವಿರುದ್ಧ ಸಿಡಿದೆದ್ದಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರು ಗುರುವಾರ ಹೇಳಿದ್ದಾರೆ. 
ಈ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಎತ್ತಿದ ವಿಷಯ ನನ್ನ ಕೈಮೀರಿ ಹೋಗಿದೆ. ರಾಜಕೀಯಕ್ಕೆ ಪ್ರವೇಶಿಸುವ ಇಚ್ಛೆ ನನಗಿಲ್ಲ ಎಂಬುದನ್ನು ನಾನು ಮೊದಲು ಸ್ಪಷ್ಟಪಡಿಸುವೆ. ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ ಅಷ್ಟೆ. ಆದರೆ, ಈ ವಿಷಯ ಇಷ್ಟೊಂದು ದೊಡ್ಡ ತಿರುವು ಪಡೆಯುತ್ತದೆ ಎಂದು ಯೋಚಿಸಿಯೇ ಇರಲಿಲ್ಲ. ನನಗಿದು ನಿಜಕ್ಕೂ ಕೆಟ್ಟ ಸಮಯ, ಈ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಇನ್ನು ಮುಂದೆ ಈ ವಿಷಯವನ್ನು ಮಾತನಾಡಲಾರೆ ಎಂದು ಹೇಳಿದ್ದಾರೆ. 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಿತ ವಿದ್ಯಾರ್ಥಿಯೊಬ್ಬರು ರಾಮಜಾಸ್ ಕಾಲೇಜಿನ ಸೆಮಿನಾರ್ ವೊಂದರಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಕಾಲೇಜಿನ ಸೆಮಿನಾರ್ ರನ್ನು ಬಲವಂತವಾಗಿ ರದ್ದುಪಡಿಸಿದ್ದರು. ಆ ಬಳಿಕ ಕಾಲೇಜು ಕ್ಯಾಂಪಸ್ ನಲ್ಲಿ ವಿವಾದ ತಲೆ ಎತ್ತಿತ್ತು. 
ತದನಂತರ ಗುರ್ಮೆಹರ್ ಕೌರ್ ಸಾಮಾಜಿಕ ಜಾಲತಾಣದಲ್ಲಿ ಎಬಿವಿಪಿ ವಿರುದ್ಧ ಅಭಿಯಾನ ನಡೆಸಿದ್ದರು. ಅಭಿಯಾನದ ಬಳಿಕ ಕೌರ್ ಗೆ ಜೀವ ಬೆದರಿಕೆ ಹಾಗೂ ಅತ್ಯಾಚಾರ ಬೆದರಿಕೆಗಳು ಬಂದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.