ದೇಶ

ಭಾರತ-ಚೀನಾ ಗಡಿ ವಿವಾದ: 1962ರ ಭಾರತವೇ ಬೇರೆ, 2017ರ ಪರಿಸ್ಥಿತಿಯೇ ಬೇರೆ: ಅರುಣ್ ಜೇಟ್ಲಿ

1962ರ ಭಾರತದ ಸ್ಥಿತಿಯೇ ಬೇರೆ ಈಗೀನ ಭಾರತದ ಪರಿಸ್ಥಿತಿಯೇ ಬೇರೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ....

ಭಾರತ-ಚೀನಾ ಗಡಿ ವಿವಾದ: 1962ರ ಭಾರತವೇ ಬೇರೆ, 2017ರ ಪರಿಸ್ಥಿತಿಯೇ ಬೇರೆ: ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Published On :
ನವದೆಹಲಿ: 1962ರ ಭಾರತದ ಸ್ಥಿತಿಯೇ ಬೇರೆ ಈಗೀನ ಭಾರತದ ಪರಿಸ್ಥಿತಿಯೇ ಬೇರೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಭಾರತ ಇತಿಹಾಸದಿಂದ ಪಾಠ ಕಲಿಯಬೇಕು ಎಂಬ ಚೀನಾ ಹೇಳಿಕೆಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.
ಭಾರತ 1962ರ ಯುದ್ಧದ ಸೋಲಿನಿಂದ ಪಾಠ ಕಲಿಯಬೇಕು ಎಂಬ ಚೀನಾ ಸೇನಾ ವಕ್ತಾರರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ ಅವರು, 'ಒಂದು ವೇಳೆ ಅವರು ನಮಗೆ ಸೋಲಿನ ಇತಿಹಾಸವನ್ನು ನೆನಪಿಸುವ ಯತ್ನ ಮಾಡಿದರೆ, ಆಗಿನ ಪರಿಸ್ಥಿತಿಯೇ ಬೇರೆ. ಈಗೀನ ಪರಿಸ್ಥಿತಿಯೇ ಬೇರೆ' ಎಂದು ನಾವು ಎಚ್ಚರಿಸಬೇಕಾಗುತ್ತದೆ ಎಂದಿದ್ದಾರೆ.
ಭಾರತೀಯ ಸೇನೆಯ ಉನ್ನತ ಸ್ಥಾನದಲ್ಲಿರುವವರು ಇತಿಹಾಸದಿಂದ ಪಾಠ ಕಲಿಯಬೇಕು ಮತ್ತು ಯುದ್ಧದ ಕುರಿತು ಪುಕಾರು ಮಾಡುವುದನ್ನು ನಿಲ್ಲಿಸಬೇಕು ಎಂದು ನಿನ್ನೆ ಪೀಪಲ್ಸ್ ಲಿಬ್ರೆರೇಷನ್ ಆರ್ಮಿಯ ವಕ್ತಾರ ಕರ್ನಲ್ ವೂ ಕಿಯಾನ್ ಹೇಳಿದ್ದರು.
ವೂ ಅವರು 1962ರ ಭಾರತ-ಚೀನಾ ಯುದ್ಧ ನೆನಪಿಸುತ್ತಾ ಐತಿಹಾಸಿಕ ಪಾಠಗಳಿಂದ ಭಾರತೀಯ ಸೇನೆ ಕಲಿಯಬೇಕಾಗಿದೆ ಎಂದು ಎಚ್ಚರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.