ಮುಖ್ಯ ಕಾರ್ಯನಿರ್ವಾಹಕ ಸೇರಿ ಜಿಟಿಎಗೆ 45 ಚುನಾಯಿತ ಸದಸ್ಯರ ರಾಜೀನಾಮೆ
ಗೋರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ)ಗೆ ಮುಖ್ಯ ಕಾರ್ಯನಿರ್ವಾಹಕ ಬಿಮಾಲ್ ಗುರುಂಗ್ ಸೇರಿ 45 ಚುನಾಯಿತ ಸದಸ್ಯರು ರಾಜೀನಾಮೆ ನೀಡಿದ್ದು, ಆಡಳಿತಾತ್ಮಕ ಸಂಸ್ಥೆಯಿಂದ...

Published On :
ಡಾರ್ಜಿಲಿಂಗ್: ಗೋರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ)ಗೆ ಮುಖ್ಯ ಕಾರ್ಯನಿರ್ವಾಹಕ ಬಿಮಾಲ್ ಗುರುಂಗ್ ಸೇರಿ 45 ಚುನಾಯಿತ ಸದಸ್ಯರು ರಾಜೀನಾಮೆ ನೀಡಿದ್ದು, ಆಡಳಿತಾತ್ಮಕ ಸಂಸ್ಥೆಯಿಂದ ಹೊರನಡೆದಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಗೋರ್ಖಾ ಜನಮುಕ್ತಿ ಮೋರ್ಚಾಗೆ(ಜಿಜೆಎಂ) ಗೆ ಸೇರಿದವರಾಗಿದ್ದು, ಜಿಜೆಂ ಪ್ರತ್ಯೇಕ ಗೋರ್ಖಾ ಲ್ಯಾಂಡ್ ರಾಜ್ಯಕ್ಕಾಗಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದೆ. ಚುನಾಯಿತ ಸದಸ್ಯರು ರಾಜೀನಾಮೆ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಜೆಎಂ ನ ಪ್ರಧಾನ ಕಾರ್ಯದರ್ಶಿ ರೋಷನ್ ಗಿರಿ, " ಜಿಟಿಎ ಚುನಾಯಿತ ಸದಸ್ಯರ ರಾಜೀನಾಮೆ ಪತ್ರವನ್ನು ಪ್ರಧಾನ ಕಾರ್ಯದರ್ಶಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಗೋರ್ಖಾ ಜನಮುಕ್ತಿ ಮೋರ್ಚಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಟಿಎಯನ್ನು ಪ್ರಹಸನಕ್ಕೀಡುಮಾಡಿದ್ದಾರೆ. ಜಿಜೆಎಂ ಗೋರ್ಖಾ ಹಿಲ್ಸ್ ನ ಜನತೆಗಾಗಿ ಹಾಗೂ ಗೋರ್ಖಾಲ್ಯಾಂಡ್ ರಾಜ್ಯಕ್ಕಾಗಿ ಹೋರಾಡುತ್ತದೆ ಎಂದು ರೋಷನ್ ಗಿರಿ ಹೇಳಿದ್ದಾರೆ.
ತ್ರಿಪಕ್ಷೀಯ ಜಿಟಿಎ ಒಪ್ಪಂದವನ್ನು ವಾಪಸ್ ಪಡೆಯುವುದಕ್ಕೆ ಜಿಜೆಎಂ ನಿರ್ಧರಿಸಿದ ನಂತರ 45 ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡಿದ್ದಾರೆ. 2011ರಲ್ಲಿ ಗೋರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ) ಸ್ಥಾಪನೆ ಮಾಡ ಲಾಗಿದ್ದು, ಕೇಂದ್ರ-ಪ.ಬಂಗಾಲ ಸರ್ಕಾರ ಸಂವಿಧಾನದ 6ನೇ ಪರಿಚ್ಛೇದ ಅನ್ವಯ ಅರೆ ಸ್ವಾಯತ್ತ ಸ್ಥಾನಮಾನ ನೀಡಿತ್ತು. ಈ ಸಮಿತಿಗೆ ಜಿಜೆಎಂನ ಮುಖ್ಯಸ್ಥ ಬಿಮಲ್ ಗುರುಂಗ್‌ರನ್ನೇ ನೇಮಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ResignationGorkhaland Territorial Administration45 elected membersಗೋರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್45 ಚುನಾಯಿತ ಸದಸ್ಯರ ರಾಜೀನಾಮೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


