ನವಜಾತ ಶಿಶು ಸತ್ತಿದೆಯೆಂದು ಆಸ್ಪತ್ರೆ ಘೋಷಣೆ: ಸಂಸ್ಕಾರದ ವೇಳೆ ಮಗು ಜೀವಂತ
ನವಜಾತ ಶಿಶು ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಘೋಷಿಸಿದ ಹಿನ್ನೆಲೆಯಲ್ಲಿ ಪೋಷಕರು ಸಂಸ್ಕಾರ ಮಾಡಲು ಮುಂದಾದರು. ಈ ವೇಳೆ ಮಗು ಜೀವಂತವಾಗಿರುವುದು ...

Published On :
ನವದೆಹಲಿ: ನವಜಾತ ಶಿಶು ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಘೋಷಿಸಿದ ಹಿನ್ನೆಲೆಯಲ್ಲಿ ಪೋಷಕರು ಸಂಸ್ಕಾರ ಮಾಡಲು ಮುಂದಾದರು. ಈ ವೇಳೆ ಮಗು ಜೀವಂತವಾಗಿರುವುದು ಕಂಡು ಬಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಕೇಂದ್ರ ಸರ್ಕಾರದ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಜನಿಸಿದ ಮಗು ಮಗು ಸಾವನ್ನಪ್ಪಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ನಂತರ ಪೋಷಕರು ಮಗುವನ್ನು ಸಂಸ್ಕಾರ ಮಾಡಲು ತೆರಳಿದ್ದಾರೆ. ಈ ವೇಳೆ ಮಗು ಜೀವಂತವಾಗಿರುವುದು ಕಂಡು ಬಂದಿದೆ.
ಆದರೆ ಆಸ್ಪತ್ರೆಯಲ್ಲಿ ಅಂದು ಎರಡು ಶಿಶುಗಳು ಜನಿಸಿದ್ದು, ಒಂದು ಮಗು ಸತ್ತಿತ್ತು, ಹೀಗಾಗಿ ಸಿಬ್ಬಂದಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪೋಲೀಸರು ಹೇಳಿದ್ದಾರೆ.
ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಬಾದರಾಪುರ್ ನಿವಾಸಿಗೆ ಹೆರಿಗೆಯಾಗಿತ್ತು, ಮಗು ಉಸಿರಾಡುವುದನ್ನು ಗುರುತಿಸಲು ಸಿಬ್ಬಂದಿ ವಿಫಲರಾಗಿದ್ದರು, ಹೀಗಾಗಿ ಮಗು ಸಾವನ್ನಪ್ಪಿದೆ ಎಂದು ತಿಳಿದು ಅದರ ಶವವನ್ನು ಪ್ಯಾಕ್ ಮಾಡಿ, ಪೋಷಕರಿಗೆ ನೀಡಿದ್ದರು. ಕುಟುಂಬ ಸದಸ್ಯರು ಸಂಸ್ಕಾರ ಮಾಡಲು ತೆರಳಿದ್ದರು.
ಈ ವೇಳೆ ರೋಹಿತ್ ಅವರ ಸಹೋದರಿ ಮಗುವಿನ ಚಲನ ವಲನ ಗುರುತಿಸಿದರು, ಕೂಡಲೇ ಮಗುವಿನ ಮೇಲಿದ್ದ ಪ್ಯಾಕ್ ತೆರೆದಾಗ ಶಿಶು ಉಸಿರಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಇದರಿಂದ ಆಘಾತಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
diedaliveಸಾವುನವಜಾತ ಶಿಶುಸಂಸ್ಕಾರಜೀವಂತnewborn babyburiedcentral government hospitalಕೇಂದ್ರ ಸರ್ಕಾರಿ ಆಸ್ಪತ್ರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


