ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಗ್ವಾಲಿಯರ್ ಚಹಾ ಮಾರಾಟಗಾರ
ರಾಷ್ಟ್ರಪತಿ ಚುನಾವಣೆಗೆ ಚಹಾ ಮಾರಾಟಗಾರ ಗ್ವಾಲಿಯರ್ ಲಶ್ಕರ್ ನಿವಾಸಿ ಆನಂದ್ ಸಿಂಗ್ ಕುಶ್ವಾ ಎಂಬುವರು ನಾಮಪತ್ರ ಸಲ್ಲಿಸಿ ಇದೀಗ ಸುದ್ದಿಯಾಗಿದ್ದಾರೆ...

Published On :
ಭೋಪಾಲ್: ರಾಷ್ಟ್ರಪತಿ ಚುನಾವಣೆಗೆ ಚಹಾ ಮಾರಾಟಗಾರ ಗ್ವಾಲಿಯರ್ ಲಶ್ಕರ್ ನಿವಾಸಿ ಆನಂದ್ ಸಿಂಗ್ ಕುಶ್ವಾ ಎಂಬುವರು ನಾಮಪತ್ರ ಸಲ್ಲಿಸಿ ಇದೀಗ ಸುದ್ದಿಯಾಗಿದ್ದಾರೆ.
ಆನಂದ್ ಸಿಂಗ್ ಕುಶ್ವಾ ಅವರು ಚಹಾ ಮಾರಿದ ವ್ಯಕ್ತಿ ದೇಶದ ಪ್ರಧಾನಿಯಾಗಿರುವಾಗ ನಾನೇಕೆ ರಾಷ್ಟ್ರಪತಿ ಆಗಬಾರದು ಎಂದು ಹೇಳಿದ್ದಾರೆ.
ಕುಶ್ವಾ ಅವರು ಹಲವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಅವರು ಈಗಾಗಲೇ ಉಪ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ನಾನು ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದ್ದೆ. ಈ ಬಾರಿ ನಾನು ಉತ್ತರಪ್ರದೇಶದ ಸಂಸದರು ಮತ್ತು ಶಾಸಕರ ಜತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಆನಂದ್ ಸಿಂಗ್ ಕುಶ್ವಾ ದೆಹಲಿಗೆ ತೆರಳಿ ಸಂಸತ್ ನಲ್ಲಿ ಮುಖ್ಯ ಚುನಾವಣೆ ಅಧಿಕಾರಿಯನ್ನು ಭೇಟಿ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ. ಅಂತ ಐದು ಸಾವಿರ ನಗದು, ಬೈಸಿಕಲ್, ಮನೆ, ಚಹಾ ಅಂಗಡಿ ಮತ್ತು ಪತ್ನಿಯ ಮಾಂಗಲ್ಯ ಸರವನ್ನು ಹೊಂದಿದ್ದಾಗಿ ಹೇಳಿದ್ದಾರೆ. ಇನ್ನು ಬ್ಯಾಂಕ್ ನಲ್ಲಿ 12 ಸಾವಿರ ನಗದು ಮತ್ತು ಇತರ ಬ್ಯಾಂಕ್ ಗಳಲ್ಲಿ 60 ಸಾವಿರ ಸಾಲವನ್ನು ತೋರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
nominationgwaliorಗ್ವಾಲಿಯರ್ನಾಮಪತ್ರರಾಷ್ಟ್ರಪತಿ ಚುನಾವಣೆPresident ElectionsTea-SellerAnand Singh Kushwahaಚಹಾ ಮಾರಾಟಗಾರಆನಂದ್ ಸಿಂಗ್ ಕುಶ್ವಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


