ದೇಶ

ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ: ನೌಕರನ ಅವಾಂತರ!

ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ ಮಾಡಲು ಹೋಗಿ ಮೃಗಾಲಯದ ನೌಕರನೊಬ್ಬ ಜೀವಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ಬ್ಯಾಂಕಾಕ್ ನಲ್ಲಿ...

ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ: ನೌಕರನ ಅವಾಂತರ!
ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ
Published On :
ಬ್ಯಾಂಕಾಕ್: ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ ಮಾಡಲು ಹೋಗಿ ಮೃಗಾಲಯದ ನೌಕರನೊಬ್ಬ ಜೀವಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ಬ್ಯಾಂಕಾಕ್ ನಲ್ಲಿ ನಡೆದಿದೆ. 
ಕೊಹ್ ಸಮುಯ್ ನಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದ್ದು ಪ್ರವಾಸಿಗರೊಬ್ಬರು ಇದನ್ನು ವಿಡಿಯೋ ಮಾಡಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದೆ. 
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆಯ ಬಾಯಲ್ಲಿ ಎರಡು ಕಡ್ಡಿಗಳನ್ನು ಇಟ್ಟು ಟ್ರಿಕ್ಸ್ ಮಾಡಿದ. ಈ ವೇಳೆ ಬಾಯಿ ತೆರೆದುಕೊಂಡಿದ್ದ ಮೊಸಳೆ ಏನೂ ಮಾಡದೆ ಸುಮ್ಮನೆ ಇತ್ತು. ನಂತರ ಆ ವ್ಯಕ್ತಿ ಮೊಸಳೆ ಬಾಯೊಳಗೆ ತನ್ನ ತಲೆಯನ್ನು ಇಟ್ಟಿದ್ದಾನೆ. ಕೆಲವು ಸೆಕೆಂಡ್ ಗಳ ಕಾಲ ಮೊಸಳೆ ಬಾಯಿ ತೆರೆದುಕೊಂಡೇ ಇಲ್ಲ. ಆದ್ರೆ ಇದ್ದಕ್ಕಿದ್ದಂತೆ ಬಾಯಿ ಮುಚ್ಚಿ ತಲೆ ಹಿಡಿದು ಎಳೆದಾಡಿತು. ವ್ಯಕ್ತಿಯ ಅದೃಷ್ಟ ಮೊಸಳೆ ಆತನನ್ನು ಎಳೆದುಕೊಂಡು ನೀರಿನೊಳಗೆ ಹೋಗಿಲ್ಲ. ಹೋಗಿದ್ದರೆ ಆತನ ಕತೆ ಅಷ್ಟೇ. 
ಆದರೆ ಅದೃಷ್ಟಕ್ಕೆ ಮೊಸಳೆ ಎರಡು ಬಾರಿ ತಲೆಯನ್ನು ಅತ್ತ ಇತ್ತ ಆಡಿಸಿ ನಂತರ ನೀರಿನೊಳಗೆ ಹೋಗಿದೆ. ಮೊಸಳೆ ದಾಳಿಯಲ್ಲಿ ವ್ಯಕ್ತಿಯ ಮುಖಕ್ಕೆ ಗಾಯಗಳಾಗಿವೆ. ನಿಜಕ್ಕೂ ಈ ದೃಶ್ಯ ನೋಡಲು ಭೀಕರವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.