ಅಂತಾರಾಷ್ಟ್ರೀಯ ಸಾಗರ ನ್ಯಾಯಾಧೀಕರಣದ ಮೊದಲ ಮಹಿಳಾ ಸದಸ್ಯೆಯಾಗಿ ನೀರೂ ಚಾಧಾ ಆಯ್ಕೆ
ಸಾಗರ ಕಾನೂನು ಅಂತಾರಾಷ್ಟ್ರೀಯ ನ್ಯಾಯಮಂಡಳಿಯ(ಐಟಿಎಲ್ಒಎಸ್) ಸ್ಯೆಯಾಗಿ ನೀರೂ ಚಾಧಾ...

Published On :
ನವದೆಹಲಿ: ಸಾಗರ ಕಾನೂನು ಅಂತಾರಾಷ್ಟ್ರೀಯ ನ್ಯಾಯಮಂಡಳಿಯ(ಐಟಿಎಲ್ಒಎಸ್) ಸದಸ್ಯೆಯಾಗಿ ನೀರೂ ಚಾಧಾ ಆಯ್ಕೆಗೊಂಡಿದ್ದಾರೆ. ಸಮುದ್ರಗಳ ಅಂತರರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ಣಯಿಸುವ ಉನ್ನತ ಮಟ್ಟದ ಸಂಸ್ಥೆ ಇದಾಗಿದೆ.
ಐಟಿಎಲ್ಒಎಸ್ ವೇದಿಕೆಯಲ್ಲಿ ಭಾರತೀಯ ಪರಿಣಿತೆ. ಏಷ್ಯಾ ಫೆಸಿಫಿಕ್ ಗುಂಪಿನಲ್ಲಿ ಅತಿ ಹೆಚ್ಚು ಮತ ನೀರು ಚಾದಾರಿಗೆ ಸಿಕ್ಕಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಗೋಪಾಲ್ ಬಗ್ಲೆ ಟ್ವೀಟ್ ಮಾಡಿದ್ದಾರೆ.
ನ್ಯಾಯಮಂಡಳಿಯ ಸದಸ್ಯ ಹುದ್ದೆಗೆ ನಿನ್ನೆ ಮತದಾನ ನಡೆದಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಕಾನೂನು ಸಲಹೆಗಾರ ಹುದ್ದೆಯನ್ನು ವಿಶ್ವಸಂಸ್ಥೆಯಲ್ಲಿ ವಿಜಯ ಲಕ್ಷಿ ಪಂಡಿತ್ ಅವರ ನಂತರ ವಹಿಸಿಕೊಳ್ಳುತ್ತಿರುವ ಮೊದಲ ಮಹಿಳೆ ನೀರೂ ಚಾಧಾರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
memberಸದಸ್ಯೆNeeru ChadhaInternational Tribunal for the Law of the Seaನೀರು ಚಾದಾಸಾಗರ ಕಾನೂನು ಅಂತಾರಾಷ್ಟ್ರೀಯ ನ್ಯಾಯಮಂಡಳಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


