ದೇಶ

ಪ್ರತಿಷ್ಠೆಗಾಗಿ ಬೀಫ್ ತಿನ್ನುವವರನ್ನು ನೇಣಿಗೆ ಹಾಕಿ: ಸಾಧ್ವಿ ಸರಸ್ವತಿ

ಗೋಹತ್ಯೆ ನಿಷೇಧ ಮತ್ತು ಗೋಮಾಂಸ ಸೇವನೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಹಿಂದೂಪರ ಸಂಘಟನೆಯ....

ಪ್ರತಿಷ್ಠೆಗಾಗಿ ಬೀಫ್ ತಿನ್ನುವವರನ್ನು ನೇಣಿಗೆ ಹಾಕಿ: ಸಾಧ್ವಿ ಸರಸ್ವತಿ
ಸಾಧ್ವಿ ಸರಸ್ವತಿ
Published On :
ಪಣಜಿ: ಗೋಹತ್ಯೆ ನಿಷೇಧ ಮತ್ತು ಗೋಮಾಂಸ ಸೇವನೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಹಿಂದೂಪರ ಸಂಘಟನೆಯ ಸಾಧ್ವಿ ಸರಸ್ವತಿ ಅವರು ಪ್ರತಿಷ್ಠೆಗಾಗಿ ಭೀಫ್ ತಿನ್ನುವವರನ್ನು ನೇಣಿಗೆ ಹಾಕಬೇಕು ಎಂದು ಗುರುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರತಿಷ್ಠೆಗಾಗಿ ಸ್ವತಃ ತಮ್ಮ ತಾಯಿ(ಗೋಮಾತೆ)ಯ ಮಾಂಸವನ್ನು ತಿನ್ನುವವರನ್ನು ಕೇಂದ್ರ ಸರ್ಕಾರ ನೇಣಿಗೆ ಹಾಕಬೇಕು ಎಂದು ತಾವು ಒತ್ತಾಯಿಸುವುದಾಗಿ ಮಧ್ಯಪ್ರದೇಶದ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷೆ ಸಾಧ್ವಿ ಸರಸ್ವತಿ ಅವರು ಹೇಳಿದ್ದಾರೆ.
ಗೋಮಾಂಸ ತಿನ್ನುವವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು. ಹಾಗ ಮಾತ್ರ ಗೋಮಾತೆಯ ರಕ್ಷಣೆ ನಮ್ಮ ಕರ್ತವ್ಯ ಎಂಬುದು ಅವರಿಗೆ ಗೊತ್ತಾಗುತ್ತದೆ ಎಂದು ಸಾಧ್ವಿ ಹೇಳಿದ್ದಾರೆ.
ಸಾಧ್ವಿ ಸರಸ್ವತಿ ಅವರ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳು ಕೋಮು ಸಂಘರ್ಷಕ್ಕೆ ಕಾರಣವಾಗುತ್ತವೆ ಎಂದು ಹೇಳಿದೆ. ಅಲ್ಲದೆ ಈ ಸಂಬಂಧ ಸಾಧ್ವಿ ಸರಸ್ವತಿ ವಿರುದ್ಧ ಗೋವಾ ಸರ್ಕಾರ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.