ದೇಶ

ಮದುವೆಯಾಗಲು ನಿರಾಕರಿಸಿದ ಬಾಲ್ಯದ ಗೆಳತಿಗೆ ಚೂರಿ ಇರಿತ; ಸಾವು-ಬದುಕಿನ ನಡುವೆ ಹೋರಾಟ

ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಎಂಬಿಎ ವಿದ್ಯಾರ್ಥಿನಿಗೆ ಯುವಕನೊಬ್ಬ ಚೂರಿಯಿಂದ ಇರಿದಿದ್ದಾನೆ...

ಮದುವೆಯಾಗಲು ನಿರಾಕರಿಸಿದ ಬಾಲ್ಯದ ಗೆಳತಿಗೆ ಚೂರಿ ಇರಿತ; ಸಾವು-ಬದುಕಿನ ನಡುವೆ ಹೋರಾಟ
ಚೂರಿ ಇರಿತ
Published On :
ತಿರುಪತಿ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಎಂಬಿಎ ವಿದ್ಯಾರ್ಥಿನಿಗೆ ಯುವಕನೊಬ್ಬ ಚೂರಿಯಿಂದ ಇರಿದಿದ್ದಾನೆ. 
ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ್ ನ ಕೆಎಂಎಂ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಎಂಬಿಎ ಪ್ರಥಮ ವರ್ಷದ ಪರೀಕ್ಷೆ ಬರೆದು ಹೊರ ಬಂದ ಎಂ ನಾಗಕೇತನಳಿಗೆ ಸ್ನೇಹಿತ ತನಿಷ್ ಎಂಬಾತ ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ಎಲ್ಲರ ಮುಂದೆ ಸೀನ್ ಕ್ರಿಯೆಟ್ ಮಾಡುವುದು ಬೇಡ ಎಂದು ಆತನನ್ನು ಕಾಲೇಜಿನ ಹಿಂದಕ್ಕೆ ಕರೆದುಕೊಂಡು ಹೋಗಿದ್ದಾಳೆ. 
ಅಲ್ಲಿ ಮದುವೆ ಪ್ರಸ್ತಾಪವನ್ನು ವಿದ್ಯಾರ್ಥಿನಿ ತಿರಸ್ಕರಿಸಿದ್ದಾಳೆ. ಇದರಿಂದ ಮನನೊಂದ ವಿದ್ಯಾರ್ಥಿ ಆಕೆಯ ಕುತ್ತಿಗೆಯನ್ನು ಸೀಳಿ ನಾಲ್ಕೈದು ಬಾರಿ ಭುಜಕ್ಕೆ ತಿವಿದಿದ್ದಾನೆ. ಇದನ್ನು ಕಂಡ ತನಿಷ್ ಸ್ನೇಹಿತ ಸಹ ವಿದ್ಯಾರ್ಥಿಗಳಿಗೆ ವಿಷಯ ಮುಟ್ಟಿಸಿ ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿಯ ಸ್ಥಿತಿ ಗಂಭೀರವಾಗಿದೆ. 
ನಾಗಕೇತನಳಿಗೆ ಚೂರಿ ಇರಿದ ನಂತರ ತನಿಷ್ ತಪ್ಪಿಸಿಕೊಂಡು ಹೋಗಿದ್ದು ಆತನನ್ನು ಹಿಂಬಾಲಿಸಿದ ಕೆಲ ವಿದ್ಯಾರ್ಥಿಗಳು ಆತನನ್ನು ಚಂದ್ರಗಿರಿ ರೈಲ್ವೆ ನಿಲ್ದಾಣದ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.