ಪಾಕಿಸ್ತಾನ: ಯುಎಸ್ ವೈಮಾನಿಕ ದಾಳಿಯಲ್ಲಿ ಹಕ್ಕಾನಿ ಉಗ್ರ ಕಮಾಂಡರ್ ಹತ್ಯೆ
ಪಾಕಿಸ್ತಾನದಲ್ಲಿ ಹಕ್ಕಾನಿ ಉಗ್ರ ಕಮಾಂಡರ್ ನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಪ್ರಕಟಿಸಿವೆ.

Published On :
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಕ್ಕಾನಿ ಉಗ್ರ ಕಮಾಂಡರ್ ನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಸ್ಪೀನ್ ಟಾಲ್ ಪ್ರದೇಶದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, ಹಕ್ಕಾನಿ ಉಗ್ರ ಜಾಲದ ಕಮಾಂಡರ್ ಅಬುಬಕರ್ ನ್ನು ಹತ್ಯೆ ಮಾಡಿರುವುದಾಗಿ ರೇಡಿಯೀ ಲಿಬರ್ಟಿಯ ಮಾಶಾಲ್ ರೆಡಿಯೋ ವರದಿ ಪ್ರಕಟಿಸಿದೆ. ಜೂ.12 ರಂದು ಮಧ್ಯರಾತ್ರಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಹೇಳಿದೆ, ಆದರೆ ಈ ಕುರಿತು ಪೆಂಟಗನ್ ಈ ವರೆಗೂ ಸ್ಪಷ್ಟನೆ ನೀಡಿಲಲ್.
ವೈಮಾನಿಕ ದಾಳಿಯಲ್ಲಿ 3 ಜನರಿಗೆ ಗಾಯಗಳುಂಟಾಗಿದ್ದು, ಅಫ್ಘಾನಿಸ್ತಾನ ಮೂಲದ ಅಬುಬಕರ್ ನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


