ಚೆಕ್ ಬೌನ್ಸ್ ಆದರೆ ಹುಷಾರ್!: ಜಾಮೀನು ನೀಡದೆ ನಿಮ್ಮನ್ನು ಜೈಲಿಗಟ್ಟಬಹುದು
ಬ್ಯಾಂಕಿನ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಚೆಕ್ ಬರೆದುಕೊಟ್ಟು ಅದು ಬೌನ್ಸ್ ಆದರೆ...

Published On :
ನವದೆಹಲಿ: ಬ್ಯಾಂಕಿನ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಚೆಕ್ ಬರೆದುಕೊಟ್ಟು ಅದು ಬೌನ್ಸ್ ಆದರೆ ನೀವು ಜೈಲಿನಲ್ಲಿ ಕಂಬಿ ಎಣಿಸಬೇಕಾಗಬಹುದು. ಈಗಿರುವ ಶಿಕ್ಷೆಯನ್ನು ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರ ಚೆಕ್ ಬೌನ್ಸ್ ಗೆ ಕಾರಣಕರ್ತರಾದವರಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಲು ಮುಂದಾಗಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಯೋಜಿಸುತ್ತಿದ್ದು ಈ ಮಳೆಗಾಲದ ಅಧಿವೇಶನದಲ್ಲಿಯೇ ಅದನ್ನು ಮಂಡಿಸಲು ಮುಂದಾಗಿದೆ. ನಮ್ಮ ದೇಶದಲ್ಲಿ ಸುಮಾರು 20 ಲಕ್ಷ ಚೆಕ್ ಗಳು ಇತ್ಯರ್ಥವಾಗದೆ ಉಳಿದಿವೆ.
ನೆಗೋಬಾಯ್ಡ್ ಇನ್ಸ್ಟ್ರುಮೆಂಟ್ಸ್ (ಎನ್ಐ) ಆಕ್ಟ್ ನಡಿ, ಕೋರ್ಟ್ ನಲ್ಲಿ ಕೇಸು ದಾಖಲಾದ ತಕ್ಷಣ, ಕೋರ್ಟ್ ನ ಹೊರಗೆ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವಂತೆ ನಿರ್ದಿಷ್ಟ ಕಾಲಾವಧಿ ನೀಡಲಾಗುತ್ತದೆ. ಇದರಲ್ಲಿ ವಿಫಲವಾದರೆ ಬಾಕಿದಾರನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಮತ್ತು ಜಾಮೀನು ನೀಡುವಾಗ ಕಠಿಣ ಷರತ್ತನ್ನು ವಿಧಿಸಲಾಗುತ್ತದೆ.
ಕಳೆದ ವರ್ಷ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು, ಚೆಕ್ ನ್ನು ಕ್ಲಿಯರೆನ್ಸ್ಗಾಗಿ ನೀಡಲಾದ ಸ್ಥಳದಲ್ಲಿ ಕೇಸನ್ನು ಕೋರ್ಟ್ ನಲ್ಲಿ ದಾಖಲಿಸಲು ಅವಕಾಶ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


