ದೇಶ

ಅಮರಣಾಂತ ಉಪವಾಸ ಅಂತ್ಯಗೊಳಿಸಿದ ಶಿವರಾಜ್ ಸಿಂಗ್ ಚೌಹಾಣ್

ರಾಜ್ಯದಲ್ಲಿ ರೈತರ ಪ್ರತಿಭಟನೆ ಹಿಂಸೆಗೆ ತಿರುಗಿದ್ದಕ್ಕೆ, ಶಾಂತಿ ನೆಲೆಸಲು ಮನವಿ ಮಾಡಿ ಶನಿವಾರದಿಂದ ಅಮರಣಾಂತ ಉಪವಾಸ ಪ್ರಾರಂಭಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಅಮರಣಾಂತ ಉಪವಾಸ ಅಂತ್ಯಗೊಳಿಸಿದ ಶಿವರಾಜ್ ಸಿಂಗ್ ಚೌಹಾಣ್
ಅಮರಣಾಂತ ಉಪವಾಸ ಅಂತ್ಯಗೊಳಿಸಿದ ಶಿವರಾಜ್ ಸಿಂಗ್ ಚೌಹಾಣ್
Published On :
ಭೋಪಾಲ್: ರಾಜ್ಯದಲ್ಲಿ ರೈತರ ಪ್ರತಿಭಟನೆ ಹಿಂಸೆಗೆ ತಿರುಗಿದ್ದಕ್ಕೆ, ಶಾಂತಿ ನೆಲೆಸಲು ಮನವಿ ಮಾಡಿ ಶನಿವಾರದಿಂದ ಅಮರಣಾಂತ ಉಪವಾಸ ಪ್ರಾರಂಭಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಉಪವಾಸ ಅಂತ್ಯಗೊಳಿಸಿದ್ದಾರೆ. 
ದಸರಾ ಮೈದಾನದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದ ಉಪವಾಸಕ್ಕೆ ಅಂತ್ಯ ಹಾಡಲು ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ಚೌಹಾಣ್ ಅವರಿಗೆ ಎಳನೀರು ನೀಡಿದ್ದಾರೆ. 
ಸಾಲ ಮನ್ನಾ ಮತ್ತು ರೈತರ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆಗಾಗಿ ರೈತರು ಜೂನ್ ೧ ರಿಂದ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕೆ ಜೂನ್ ೬ ರಂದು ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಐವರು ರೈತರು ಮೃತಪಟ್ಟಿದ್ದರು. ಇದು ರೈತರ ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸಿತ್ತು. ನಂತರ ಶಾಂತಿಗೆ ಮನವಿ ಮಾಡಿ ಶಿವರಾಜ್ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. 
ನಾನು ರಾಜ್ಯದ ಜನತೆ ಮತ್ತು ರೈತರಿಗಾಗಿ ಬದುಕಿರವುದು ಅವರಿಗಾಗಿ ಪ್ರಾಣ ಬಿಡಲು ಸಿದ್ಧ ಎಂದು ಇದಕ್ಕೂ ಮುಂಚೆ ಹೇಳಿದ್ದರು. ರೈತರು ಮುಂದೆ ತೊಂದರೆಗಳನ್ನು ಅನುಭವಿಸದಂತೆ ನೋಡಿಕೊಳ್ಳುವುದಾಗಿಯೂ ಹೇಳಿದ್ದರು. 
ಮಧ್ಯಪ್ರದೇಶದ ಮಂಡಸೌರ್ ರೈತರ ಪ್ರತಿಭಟನೆ ಕಾಳ್ಗಿಚ್ಚಿನಂತೆ ಇರರ ಜಿಲ್ಲೆಗಳಿಗೂ ಹಬ್ಬಿತ್ತು. ಪೋಲೀಸರ ಗುಂಡೇಟಿಗೆ ಬಲಿಯಾದ ರೈತರ ಕುಟುಂಬದವರು ಶಿವರಾಜ್ ಉಪವಾಸ ಅಂತ್ಯಗೊಳಿಸಬೇಕು ಎಂದು ಹೇಳಿದ್ದರು. 
ಶನಿವಾರ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿ ಮಾಡಿದ್ದ ಚೌಹಾಣ್ ಹಲವು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. 
ಇವೆಲ್ಲದರ ನಡುವೆಯೂ ಸಾಲ ಮನ್ನಾ ಮಾಡುವ ಬೇಡಿಕೆಯನ್ನು ಮುಖ್ಯಮಂತ್ರಿ ಮತ್ತು ಕೃಷಿ ಸಚಿವ ಗೌರಿ ಶಂಕರ್ ಬಿಸೇನ್ ತಳ್ಳಿಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.