ದೇಶ

ಉಗ್ರರಿಗೆ ಹಣ ಸಹಾಯ: ಎನ್ಐಎಯಿಂದ ಗಿಲಾನಿ ಅಳಿಯ ಅಲ್ತಾಫ್​​ ಫಂತೂಷ್ ವಿಚಾರಣೆ

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್ಐಎ, ಈಗ ಪ್ರತ್ಯೇಕತಾವಾದಿ ಗಿಲಾನಿ ಅಳಿಯ ಅಲ್ತಾಫ್ ಫಂತೂಷ್ ವಿಚಾರಣೆ ನಡೆಸಿದೆ.

ಉಗ್ರರಿಗೆ ಹಣ ಸಹಾಯ: ಎನ್ಐಎಯಿಂದ ಗಿಲಾನಿ ಅಳಿಯ ಅಲ್ತಾಫ್​​ ಫಂತೂಷ್ ವಿಚಾರಣೆ
ಸಯೀದ್ ಅಲಿ ಶಾ ಗಿಲಾನಿ
Published On :
ನವದೆಹಲಿ: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್ಐಎ, ಈಗ ಪ್ರತ್ಯೇಕತಾವಾದಿ ಗಿಲಾನಿ ಅಳಿಯ ಅಲ್ತಾಫ್ ಫಂತೂಷ್ ವಿಚಾರಣೆ ನಡೆಸಿದೆ. 
ಕಾಶ್ಮೀರದಲ್ಲಿ ಅಸ್ಥಿರತೆ ಉಂಟು ಮಾಡಲು ಉಗ್ರರಿಗೆ ಪ್ರತ್ಯೇಕತಾವಾದಿಗಳು ಆರ್ಥಿಕ ಸಹಾಯ ಮಾಡುತ್ತಿರುವ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಶ್ರೀನಗರದಲ್ಲಿರುವ ಗಿಲಾನಿ ಶಾ ನಿವಾಸದ ಮೇಲೆ ದಾಳಿ ನಡೆಸಿದ್ದಾಗ ಅಲ್ತಾಫ್ ಫಂತೂಷ್ ಬಗ್ಗೆ ಎನ್ಐಎ ಮಾಹಿತಿ ಸಂಗ್ರಹಿಸಿದ್ದು, ನಂತರ ವಿಚಾರಣೆಗೊಳಪಡಿಸಿದೆ. 
ಪ್ರತ್ಯೇಕತಾವಾದಿ ಗಿಲಾನಿ ಅಳಿಯ ಫಂತೂಷ್ ತೆಹ್ರೀಕ್-ಎ-ಹುರಿಯತ್ ನಲ್ಲೂ ಪ್ರಭಾವಿ ವ್ಯಕ್ತಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಜೂ.03 ರಂದು ಎನ್ಐಎ ಜಮ್ಮು-ಕಾಶ್ಮೀರದ 26 ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.