ಸರ್ಕಾರಿ ನೌಕರರ ಭ್ರಷ್ಟಾಚಾರ ಪ್ರಕರಣ ತನಿಖೆಗೆ ಅರು ತಿಂಗಳ ಕಾಲ ಮಿತಿ!
ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣ ತನಿಖೆ ಸಂಬಂಧ ಇದ್ದ 50 ವರ್ಷಗಳ ಹಿಂದಿನ ಕಾನೂನಿಗೆ ತಿಲಾಂಜಲಿ ಹಾಕಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಪ್ರಕರಣದ ತನಿಖೆಗೆ 6 ತಿಂಗಳ ಗಡುವು ನೀಡುವ ಕಾನೂನು ತಿದ್ದುಪಡಿ ಮಾಡಲು ನಿರ್ಧರಿಸಿದೆ.

ನವದೆಹಲಿ: ಸರ್ಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ತನಿಖೆ ಸಂಬಂಧ ಇದ್ದ 50 ವರ್ಷಗಳ ಹಿಂದಿನ ಕಾನೂನಿಗೆ ತಿಲಾಂಜಲಿ ಹಾಕಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಪ್ರಕರಣದ ತನಿಖೆಗೆ 6 ತಿಂಗಳ ಗಡುವು ನೀಡುವ ಕಾನೂನು ತಿದ್ದುಪಡಿ ಮಾಡಲು ನಿರ್ಧರಿಸಿದೆ.
ಸರ್ಕಾರಿ ನೌಕರರ ಭ್ರಷ್ಟಾಚಾರ ಹಗರಣ ತನಿಖೆ ಸಂಬಂಧ ಪ್ರಸ್ತುತ ಇರುವ 50 ವರ್ಷಗಳ ಹಿಂದಿನ ಕಾನೂನಿಗೆ ತಿಲಾಂಜಲಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಕೇಂದ್ರ ನಾಗರಿಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1965 ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ನೂತನ ತಿದ್ದುಪಡಿಯನ್ವಯ ಕಾಯ್ದೆಯಡಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇರೆಗೆ ಸರ್ಕಾರಿ ನೌಕರನ ವಿರುದ್ಧದ ತನಿಖೆಯನ್ನು ಆರು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸರ್ಕಾರಿ ನೌಕರರ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸುವ ತನಿಖಾ ಪ್ರಧಿಕಾರ 6 ತಿಂಗಳೊಳಗೆ ತನ್ನ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಕಾನೂನು ರೂಪಿಸಲಾಗುತ್ತಿದೆ. ಕೆಲವು ಪ್ರಮುಖ ಪ್ರಕರಣಗಳಲ್ಲಿ ಆರೋಪ ಹೊತ್ತ ಅಧಿಕಾರಿ ಸೂಕ್ತ ಕಾರಣ ನೀಡಿ ತನಿಖಾ ಅವಧಿಯ ವಿಸ್ತರಣೆಗೆ ಮನವಿ ಮಾಡಿಕೊಳ್ಳಬಹುದಾದರೂ ನಿರ್ಧಾರ ಮಾತ್ರ ಶಿಸ್ತು ಪ್ರಾಧಿಕಾರ ತೆಗೆದುಕೊಳ್ಳಬೇಕಾಗಿರುತ್ತದೆ. ಆರೋಪಿ ಸರ್ಕಾರಿ ನೌಕರ ಶಿಸ್ತು ಪ್ರಾಧಿಕಾರಕ್ಕೆ ಸೂಕ್ತ ಕಾರಣಗಳನ್ನು ನೀಡಿ ಮನವಿ ಮಾಡಿಕೊಂಡು ಬಳಿಕ ಪ್ರಾಧಿಕಾರದ ಅನುಮತಿ ಪಡೆಯುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.
ಈ ಹಿಂದಿನ ಕಾಯ್ದೆಯಲ್ಲಿ ಸರ್ಕಾರಿ ಅಧಿಕಾರಿಗಳ ಭ್ರಷ್ಟಚಾರ ಪ್ರಕರಣಗಳ ತನಿಖೆಗೆ ಯಾವುದೇ ರೀತಿಯ ಗಡುವು ಅಥವಾ ಕಾಲಾವಕಾಶ ಮಿತಿ ಇರಲಿಲ್ಲ. ಇದೇ ಕಾರಣಕ್ಕೆ ಇಂದಿಗೂ ಸಾಕಷ್ಟು ವರ್ಷಗಳ ಹಳೆಯ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲೇ ಇವೆ. ಕೆಲವು ಪ್ರಕರಣಗಳು ಮುಚ್ಚಿಹೋಗಿದ್ದು, ಕೆಲವು ಪ್ರಕರಣಗಳನ್ನು ಬೇಕೆಂದೇ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


