ವ್ಯಾಪಂ ಹಗರಣ: ಸಿಬಿಐ ನಿಂದ ಎರಡು ಪ್ರತ್ಯೇಕ ಚಾರ್ಜ್ ಶೀಟ್
ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗ್ವಾಲಿಯರ್ ಕೋರ್ಟ್ ಗೆ ಇಬ್ಬರು ಅಭ್ಯರ್ಥಿಗಳು ಹಾಗೂ ಮೂವರು ಮಧ್ಯವರ್ತಿಗಳ ವಿರುದ್ಧ

Published On :
ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗ್ವಾಲಿಯರ್ ಕೋರ್ಟ್ ಗೆ ಇಬ್ಬರು ಅಭ್ಯರ್ಥಿಗಳು ಹಾಗೂ ಮೂವರು ಮಧ್ಯವರ್ತಿಗಳ ವಿರುದ್ಧ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಿದೆ.
ಎರಡು ಪ್ರಕರಣಗಳಲ್ಲಿಯೂ ವಂಚನೆ, ಫೋರ್ಜರಿ ಸೇರಿದಂತೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯಿದೆ ಅನ್ವಯ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ ಸೆಕ್ಷನ್ 66ಡಿ ಐಟಿ ಕಾಯಿದೆಯಡಿ ಫೆಬ್ರವರಿ 24 2013 ರಂದು ಅಭ್ಯರ್ಥಿಗಳ ವಿರುದ್ಧ ಕೇಸು ದಾಖಲಿಸಿತ್ತು. ಆರೋಪಿತ ಅಭ್ಯರ್ಥಿಗೆ ಎರಡು ರೋಲ್ ನಂಬರ್ ಗಳನ್ನು ನೀಡಲಾಗಿತ್ತು. ಸಬ್ ಇನ್ಸ್ ಪೆಕ್ಟರ್, ಸುಬೇದಾರ್, ಪ್ಲಾಟೂನ್ ಕಮಾಂಡರ್ ಸೇರಿದಂತೆ ಎಲ್ಲರಿಗೂ ಅರ್ಜಿ ನೀಡಲಾಗಿತ್ತು ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿತ್ತು.
16ನೇ ಸೆಪ್ಟಂಬರ್ 2012 ರಂದು ನಡೆದ ಪರೀಕ್ಷೆಯಲ್ಲಿ ಆರೋಪಿತ ಅಭ್ಯರ್ಥಿ ಸ್ವತಃ ಪರೀಕ್ಷೆಗೆ ಹಾಜರಾಗಿದ್ದ, ಜೊತೆಗೆ ಇನ್ನೊಂದು ರೋಲ್ ನಂಬರ್ ನಲ್ಲಿ ತನ್ನ ಸಂಬಂಧಿಯ ಹಾಜರಾಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


