ಆಫ್ಘಾನಿಸ್ತಾನ: ಇಸಿಸ್ ಉಗ್ರ ಸಂಘಟನೆ ಸೇರಿದ್ದ ಕೇರಳದ ಯುವಕ ಸಾವು!
ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಶಂಕಿತ ಇಸಿಸ್ ಉಗ್ರ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕಾಸರಗೋಡು: ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಶಂಕಿತ ಇಸಿಸ್ ಉಗ್ರ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಕೇರಳದ ಕಾಸರಗೋಡಿನಲ್ಲಿರುವ ಮರ್ವಾನ್ ಇಸ್ಮಾಯಿಲ್ ಪೋಷಕರಿಗೆ ಟೆಲಿಗ್ರಾಮ್ ಮೂಲಕ ಸಂದೇಶ ತಿಳಿಸಲಾಗಿದ್ದು, ಮರ್ವಾನ್ ಇಸ್ಮಾಯಿಲ್ ಆಫ್ಘಾನಿಸ್ತಾನ ಸೇನೆಯ ವಾಯು ದಾಳಿಯಲ್ಲಿ ಹುತಾತ್ಮನಾಗಿದ್ದಾನೆ ಎಂದು ಸಂದೇಶ ರವಾನಿಸಲಾಗಿದೆ. ಈ ಬಗ್ಗೆ ಇಂದು ಮರ್ವಾನ್ ಇಸ್ಮಾಯಿಲ್ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಸಮಾಜಿಕ ಕಾರ್ಯಕರ್ತ ಬಿಸಿ ಅಬ್ದುಲ್ ರೆಹಮಾನ್ ಅವರಿಗೆ ಅಂದೇ ಸಂದೇಶ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಆಫ್ಘಾನಿಸ್ತಾನ ಮತೀಯವಾದಿಗಳಿಂದ ತುಂಬಿರುವ ತ್ಪಿಕ್ಕಾರಿಪುರ್ ನಲ್ಲಿ ಆಪ್ಘನ್ ಸೇನೆ ವಾಯುದಾಳಿ ನಡೆಸಿತ್ತು. ಈ ವೇಳೆ ಹತ್ತಾರು ಇಸಿಸ್ ಉಗ್ರರು ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇದೇ ದಾಳಿಯಲ್ಲೇ ಮರ್ವಾನ್ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಮರ್ವಾನ್ ಸಾವಿನ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕಾಬೂಲ್ ನಲ್ಲಿರುವ ಭಾರತೀಯ ಹೈಕಮಿಷನ್ ಸ್ಥಳೀಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇರುವುದಾಗಿ ತಿಳಿದುಬಂದಿದೆ.
ಕಳೆದ ವರ್ಷ ಕೇರಳದಿಂದ ಸುಮಾರು 11 ಮಂದಿ ಯುವಕರು ನಾಪತ್ತೆಯಾಗಿದ್ದರು. ಬಳಿಕ ಇವರೆಲ್ಲರೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಹೇಳಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


