ತೆಲಂಗಾಣ: ನಿದ್ದೆ ಮಾಡುತ್ತಿದ್ದ ಶಿಕ್ಷಕನ ಫೋಟೊ ತೆಗೆದ ವಿದ್ಯಾರ್ಥಿ, ಶಿಕ್ಷಕ ಅಮಾನತು!
ಶಾಲೆಗಳಲ್ಲಿ ತರಗತಿ ನಡೆಯುತ್ತಿರುವಾಗ ವಿದ್ಯಾರ್ಥಿಗಳು ನಿದ್ದೆ ಮಾಡುವ ಉದಾಹರಣೆಗಳಿವೆ, ಆದರೆ ತೆಲಂಗಾಣದ ಮೆಹಬೂಬ್ ನಗರದ ಶಾಲೆಯಲ್ಲಿ ಶಿಕ್ಷಕರೇ ನಿದ್ದೆ ಮಾಡಿದ್ದು,

Published On :
ಹೈದರಾಬಾದ್: ಶಾಲೆಗಳಲ್ಲಿ ತರಗತಿ ನಡೆಯುತ್ತಿರುವಾಗ ವಿದ್ಯಾರ್ಥಿಗಳು ನಿದ್ದೆ ಮಾಡುವ ಉದಾಹರಣೆಗಳಿವೆ, ಆದರೆ ತೆಲಂಗಾಣದ ಮೆಹಬೂಬ್ ನಗರದ ಶಾಲೆಯಲ್ಲಿ ಶಿಕ್ಷಕರೇ ನಿದ್ದೆ ಮಾಡಿದ್ದು, ವಿದ್ಯಾರ್ಥಿಯೊಬ್ಬ ನಿದ್ದೆ ಮಾಡುತ್ತಿದ್ದ ಶಿಕ್ಷಕರ ಫೋಟೊ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದಾನೆ.
ಶಿಕ್ಷಣ ಇಲಾಖೆಗೆ ಕಳಿಸಿದ ನಂತರ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡಿದ್ದು, ಅಮಾನತು ಮಾಡಿದ್ದಾರೆ. ಈ ಘಟನೆಯಾದ ಬಳಿಕ ಫೋಟೊ ತೆಗೆದು ಶಿಕ್ಷಕನ ಅಮಾನತಿಗೆ ಕಾರಣವಾಗಿದ್ದ 10 ನೇ ತರಗತಿ ವಿದ್ಯಾರ್ಥಿಯನ್ನು ವಾಲಿಬಾಲ್ ಪೋಸ್ಟ್ ಗೆ ಕಟ್ಟಿ ಥಳಿಸಲಾಗಿದೆ.
ನಿದ್ದೆ ಮಾಡುತಿದ್ದ ಶಿಕ್ಷಕನ ಫೋಟೊ ತೆಗೆದು ಕಳಿಸಿದ್ದರಿಂದ ವಿದ್ಯಾರ್ಥಿ ವಿರುದ್ಧ ಇತರ ಶಿಕ್ಷಕರೂ ಅಸಮಾಧಾನಗೊಂಡಿದ್ದು, ಪೊಲೀಸರನ್ನು ಕರೆಸಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


