ಭಾರತದ ಬತ್ತಳಿಕೆ ಸೇರಲಿವೆ ವಿನಾಶಕಾರಿ ಎಂಐ-17 ಹೆಲಿಕಾಪ್ಟರ್ ಗಳು!
ಸೇನೆಯ ಆಧುನೀಕರಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರ ರಷ್ಯಾ ನಿರ್ಮಿತ ಎಂಐ-17 ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡುವ ಕುರಿತು ವರ್ಷ್ಯಾಂತ್ಯದಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

ನವದೆಹಲಿ: ಸೇನೆಯ ಆಧುನೀಕರಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರ ರಷ್ಯಾ ನಿರ್ಮಿತ ಎಂಐ-17 ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡುವ ಕುರಿತು ವರ್ಷ್ಯಾಂತ್ಯದಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಈ ಬಗ್ಗೆ ಭಾರತ ಮತ್ತು ರಷ್ಯಾ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದು, Mi-17ಸರಣಿಯ ವಿ5 ಹೆಲಿಕಾಪ್ಟರ್ ಗಳ ಖರೀದಿ ಸಂಬಂಧ ಮಾತುಕತೆ ನಡೆಸಿದ್ದಾರೆ. ಮೂಲಗಳ ವರ್ಷಾಂತ್ಯದ ವೇಳೆಗೆ ಈ ಮಹತ್ವದ ಒಪ್ಪಂದ ಅಂತಿಮ ರೂಪ ಪಡೆಯಲಿದ್ದು, ಉಭಯ ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಭಾರತ ಮತ್ತು ರಷ್ಯಾ ನಡುವೆ ಈಗಾಗಲೇ ಎಂಐ-17 ಹೆಲಿಕಾಪ್ಟರ್ ಖರೀದಿ ಸಂಬಂಧ ಒಪ್ಪಂದ ಏರ್ಪಟ್ಟಿದ್ದು, ಹೆಚ್ಚುವರಿಯಾಗಿ 48 Mi-17 ವಿ5 ಹೆಲಿಕಾಪ್ಟರ್ಗಳನ್ನು ಖರೀದಿಸುವ ಸಂಬಂಧ ಮಾತುಕತೆ ನಡೆದಿದೆ.
ಒಪ್ಪಂದದ ನಿಯಾಮವಳಿ ಹಾಗೂ ಹೆಲಿಕಾಪ್ಟರ್ ಬೆಲೆಯ ಬಗ್ಗೆ ವರ್ಷಾಂತ್ಯದಲ್ಲಿ ನಿರ್ಧಾರವಾಗಲಿದೆ ಎಂದು ರಷ್ಯಾದ ರಕ್ಷಣಾ ಸಾಮಗ್ರಿ ರಫ್ತು ಸಂಸ್ಥೆಯ ಸಿಇಓ ಅಲೆಕ್ಸಾಂಡರ್ ಮಿಕೀವ್ ತಿಳಿಸಿದ್ದಾರೆ. Mi-8 ಮತ್ತು MI-17 ಸೇರಿದಂತೆ Mi ಸರಣಿಯ300 ಕ್ಕೂ ಹೆಚ್ಚು ಹೆಲಿಕಾಪ್ಟರ್ಗಳು ಈಗಾಗಲೇ ಭಾರತದ ಬಳಿ ಇವೆ. ಜೊತೆಗೆ 2016ರ ಜನವರಿಯಲ್ಲಿ ಭಾರತಕ್ಕೆ Mi-17 ವಿ5 ಮಾದರಿಯ 150 ಹೆಲಿಕಾಪ್ಟರ್ಗಳನ್ನು ಪೂರೈಕೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
Mi-17 ವಿ5 ವಿಶೇಷತೆ ಏನು?
ಇನ್ನು ಪ್ರಸ್ತುತ ಭಾರತ ಖರೀದಿಸಲು ಮುಂದಾಗಿರುವ ಎಂಐ-17 ವಿ5 ಹೆಲಿಕಾಪ್ಟರ್ ಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ರಷ್ಯಾದ ಈ ಹಿಂದಿನ ಹೆಲಿಕಾಪ್ಟರ್ ಗಳಂತೆಯೇ ಇದೂ ಕೂಡ ವಿನಾಶಕಾರಿಯಾಗಿದೆ. ಈ ಹೆಲಿಕಾಪ್ಟರ್ಗಳು ನೈಟ್ ವಿಷನ್ ತಂತ್ರಜ್ಞಾನ ಹೊಂದಿದ್ದು, ರಾತ್ರಿ ವೇಳೆಯಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಎಲ್ಲ ಹವಾಗುಣದ ರಾಡಾರ್, ಸ್ವಯಂಚಾಲಿತ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಅಂಶಗಳನ್ನು ಈ ಹೆಲಿಕಾಪ್ಟರ್ ಹೊಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


