ದೇಶ

ಉತ್ತರಪ್ರದೇಶದಲ್ಲಿ ಎನ್'ಕೌಂಟರ್: 2 ಕ್ರಿಮಿನಲ್'ಗಳ ಹತ್ಯೆ, 7 ಪೊಲೀಸರಿಗೆ ಗಾಯ

ಉತ್ತರಪ್ರದೇಶದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ಘಟನೆಯಲ್ಲಿ ಮಾಡಲಾಗಿದ್ದು, ಘಟನೆ ವೇಳೆ 7 ಪೊಲೀಸರು ಗಾಯಗೊಂಡು ಇಬ್ಬರು ಕ್ರಿಮಿನಲ್ ಗಳು ಹತ್ಯೆಯಾಗಿರುವ...

ಉತ್ತರಪ್ರದೇಶದಲ್ಲಿ ಎನ್'ಕೌಂಟರ್: 2 ಕ್ರಿಮಿನಲ್'ಗಳ ಹತ್ಯೆ, 7 ಪೊಲೀಸರಿಗೆ ಗಾಯ
ಸಾಂದರ್ಭಿಕ ಚಿತ್ರ
Published On :
ಕೈರಾನಾ: ಉತ್ತರಪ್ರದೇಶದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ಘಟನೆಯಲ್ಲಿ ಮಾಡಲಾಗಿದ್ದು, ಘಟನೆ ವೇಳೆ 7 ಪೊಲೀಸರು ಗಾಯಗೊಂಡು ಇಬ್ಬರು ಕ್ರಿಮಿನಲ್ ಗಳು ಹತ್ಯೆಯಾಗಿರುವ ಘಟನೆ ಶನಿವಾರ ನಡೆದಿದೆ. 
ಕೈರಾನಾ ಪೊಲೀಸ್ ಠಾಣಾ ನಿಯಂತ್ರಣದಲ್ಲಿರುವ ಭುರಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಉತ್ತರಪ್ರದೇಶ ಪೊಲೀಸರು ಎನ್ ಕೌಂಟರ್ ನಡೆಸಿದ್ದು, ಇಬ್ಬರು ಕ್ರಿಮಿನಲ್ ಗಳನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. 
ಘಟನೆಯಲ್ಲಿ ಮತ್ತಿಬ್ಬರು ಕ್ರಿಮಿನಲ್ ಗಳು ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಎನ್ ಕೌಂಟರ್ ವೇಳೆ ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿ ವೇಳೆ 7 ಪೊಲೀಸರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 
ಪ್ರಸ್ತುತ ಹತ್ಯೆಯಾಗಿರುವ ಇಬ್ಬರು ಆರೋಪಿಗಳು ಕುಖ್ಯಾತ ಕ್ರಿಮಿನಲ್ ಗಳಾಗಿದ್ದು, ಈ ಹಿಂದೆ ಪೊಲೀಸರೇ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ರೂ.60,000 ಇನಾಮು ನೀಡುವುದಾಗಿ ಘೋಷಣೆ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.