ದೇಶ

ನಿತೀಶ್ ಕುಮಾರ್ ವಿರುದ್ಧ ಕೊಲೆ ಆರೋಪ ಇದೆ, ಅವರಿಗೆ ಗಲ್ಲು ಶಿಕ್ಷೆಯೂ ಆಗಬಹುದು: ಲಾಲು

ದಿಢೀರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಮಹಾ ಮೈತ್ರಿಕೂಟದ ಮಿತ್ರ ಪಕ್ಷ ಆರ್ ಜೆಡಿಗೆ ಆಘಾತ ನೀಡಿದ ನಿತೀಶ್ ಕುಮಾರ್....

ನಿತೀಶ್ ಕುಮಾರ್ ವಿರುದ್ಧ ಕೊಲೆ ಆರೋಪ ಇದೆ, ಅವರಿಗೆ ಗಲ್ಲು ಶಿಕ್ಷೆಯೂ ಆಗಬಹುದು: ಲಾಲು
ಲಾಲು ಪ್ರಸಾದ್ ಯಾದವ್
Published On :
ಪಾಟ್ನಾ: ದಿಢೀರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಮಹಾ ಮೈತ್ರಿಕೂಟದ ಮಿತ್ರ ಪಕ್ಷ ಆರ್ ಜೆಡಿಗೆ ಆಘಾತ ನೀಡಿದ ನಿತೀಶ್ ಕುಮಾರ್ ವಿರುದ್ಧ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಅವರ ವಿರುದ್ಧವೂ ಕೊಲೆ ಆರೋಪ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಾಲು, 1991ರಲ್ಲಿ ನಿತೀಶ್ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಕೊಲೆ ಆರೋಪ ಭ್ರಷ್ಟಾಚಾರ ಆರೋಪಕ್ಕಿಂತ ದೊಡ್ಡದು. ಹೀಗಾಗಿ ಈ ಪ್ರಕರಣದಲ್ಲಿ ಅವರಿಗೆ ಗಲ್ಲು ಶಿಕ್ಷೆಯೂ ಆಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಕೊಲೆ ಪ್ರಕರಣ ಸೇರಿದಂತೆ ನಿತೀಶ್ ಕುಮಾರ್ ವಿರುದ್ಧ ಹಲವು ಪ್ರಕರಣಗಳಿವೆ. ಆದರೆ ಆ ಬಗ್ಗೆ ಆರ್ ಜೆಡಿ ಸ್ಪಷ್ಟನೆ ಕೇಳಿಲ್ಲ. ಹೀಗಾಗಿ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಸ್ಪಷ್ಟನೆ ಕೇಳಲು ನಿತೀಶ್ ಕುಮಾರ್ ಯಾರು? ಅವರೇನು ಪೊಲೀಸ್ ಠಾಣೆಯೇ ಎಂದು ಲಾಲು ಪ್ರಶ್ನಿಸಿದ್ದಾರೆ.
ಐದು ವರ್ಷದ ಅವಧಿಗಾಗಿ ಜನ ಮಹಾ ಮೈತ್ರಿಕೂಟಕ್ಕೆ ಮತ ಹಾಕಿದ್ದಾರೆ. ಹೀಗಾಗಿ ರಾಜಿನಾಮೆ ನೀಡದಂತೆ ನಾನು ನಿತೀಶ್ ಕುಮಾರ್ ಅವರಿಗೆ ಹೇಳಿದ್ದೆ. ಆದರೆ ಅವರು ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆ ಕೈಜೋಡಿಸಿದ್ದಾರೆ. ರಾಜಿನಾಮೆ ನೀಡುವ ಮೂಲಕ ತಾವು ನಿಷ್ಕಳಂಕ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಲಾಲು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.