ದೇಶ

ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿ, ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿಯಾಗಿದ್ದು, ಒಗ್ಗಟಿನಿಂದ ಮಾತ್ರ ದೇಶದ ಆಭಿವೃದ್ಧಿ ಸಾಧ್ಯ ಎಂದು ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿ, ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್
ದೇಶವನ್ನುದ್ದೇಶಿಸಿ ರಾಮನಾಥ್ ಕೋವಿಂದ್ ಭಾಷಣ
Published On :

ನವದೆಹಲಿ: ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿಯಾಗಿದ್ದು, ಒಗ್ಗಟಿನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ರಾಮನಾಥ ಕೋವಿಂದ್ ಮಂಗಳವಾರ ದೇಶದ 14ನೇ  ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಸಿಜೆಐ ಜೆಎಸ್ ಖೆಹರ್ ರಿಂದ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು. ಬಳಿಕ  ದೇಶವನ್ನುದ್ದೇಶಿಸಿ ಭಾಷಣ ಮಾಡಿದ ರಾಮನಾಥ ಕೋವಿಂದ್ ಅವರು, 125 ಕೋಟಿ ಭಾರತೀಯರನ್ನು ಪ್ರತಿನಿಧಿಸುವ ಸಲುವಾಗಿ ನಾನು ಇಂದು ಇಲ್ಲಿ ನಿಂತಿದ್ದೇನೆ. ರಾಷ್ಟ್ರಪತಿ ಹುದ್ದೆ ನನಗೆ ಸಿಕ್ಕ ಅತೀ ದೊಡ್ಡ ಗೌರವ. ಈ  ಜವಾಬ್ದಾರಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಜನರಿಗೆ ನಾನು ಹೃದಯ ಪೂರ್ವಕ ವಂದನೆ ತಿಳಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ರಾಷ್ಟ್ರಪತಿ ಭವನದ ಘನತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನನ್ನ ಸಂಪೂರ್ಣ ಸಾಮರ್ಥ್ಯ ಮೀರಿ ಕಾರ್ಯ ನಿರ್ವಹಿಸುತ್ತೇನೆ. ಮಾಜಿ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್ ರಿಂದ ಹಿಡಿದು ಪ್ರಣಬ್ ದಾ (ಪ್ರಣಬ್  ಮುಖರ್ಜಿ) ಅವರ ವರೆಗಿನ ಎಲ್ಲ ರಾಷ್ಟ್ರಪತಿಗಳು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುತ್ತೇನೆ. ಎಲ್ಲರೂ ಅತ್ಯುತ್ತಮ ಮಾರ್ಗದರ್ಶಿಗಳಾಗಿದ್ದು, ದೇಶಕಂಡ ಅತ್ಯುತ್ತಮ ನಾಯಕರು. ಅದೇ ಶ್ರೇಷ್ಠತೆಯನ್ನು ಮುಂದುವರೆಸಿಕೊಂಡು  ಹೋಗುವ ವಿಶ್ವಾಸ ತಮಗಿದೆ ಎಂದು ರಾಮನಾಥ್ ಕೋವಿಂದ್ ಬಣ್ಣಿಸಿದರು.

ಇದೇ ವೇಳೆ ದೇಶದ ಜನರನ್ನುದ್ದೇಶಿಸಿ ಮಾತನಾಡಿ ಕೋವಿಂದ್ ಅವರು, ಭಾರತದ ವಿವಿಧತೆಯಲ್ಲಿ ಏಕತೆ ಎಂಬ ವಿಚಾರವೇ ಇಡೀ ವಿಶ್ವದಲ್ಲಿ ಭಾರತ ಗೌರವವನ್ನು ಇಮ್ಮಡಿಗೊಳಿಸಿದೆ. ವಿವಿಧತೆಯಲ್ಲಿ ಏಕತೆ ಭಾರತದ ಆತೀ  ದೊಡ್ಡ ಶಕ್ತಿ, ಒಗ್ಗಟ್ಟಿನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ನಾವೆಲ್ಲರೂ ಒಗಟ್ಟಾಗಿದ್ದೇವೆ. ಮುಂದೆಯೂ ಒಗ್ಗೂಡಿಯೇ ಇರಲಿದ್ದೇವೆ ಎಂದು ಹೇಳಿದರು.

ನಾನು ತುಂಬಾ ಪುಟ್ಟ ಕುಗ್ರಾಮದಿಂದ ಬಂದವನಾಗಿದ್ದು, ನನ್ನ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಡಾ.ರಾಧಾಕೃಷ್ಣನ್, ಡಾ,ಎಪಿಜೆ ಅಬ್ದುಲ್ ಕಲಾಂ ಹಾಗೂ ಪ್ರಣಬ್ ಮುಖರ್ಜಿ ಅವರಂತಹ ಧೀಮಂತರು ಸಾಗಿದ  ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ. ಇದು ನನಗೆ ಸಿಕ್ಕ ಆತ್ಯಂತ ದೊಡ್ಡ ಗೌರವ ಎಂದು ಕೋವಿಂದ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.