ಎಮನ್ ಅಹ್ಮದ್ ತೂಕ 65 ಕಿಲೋ ಇಳಿಕೆ, ದೃಢಪಡಿಸಿದ ಅಬು ದಾಬಿ ಆಸ್ಪತ್ರೆ
ವಿಶ್ವದ ದಢೂತಿ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದ, ತನ್ನ ದೇಶ ಈಜಿಪ್ಟ್ ನಲ್ಲಿ ಸರಿಯಾದ...

Published On :
ನವದೆಹಲಿ: ವಿಶ್ವದ ದಢೂತಿ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದ, ತನ್ನ ದೇಶ ಈಜಿಪ್ಟ್ ನಲ್ಲಿ ಸರಿಯಾದ ಚಿಕಿತ್ಸೆ ಸಿಗದೆ, ಆರ್ಥಿಕ ಅಡಚಣೆಯಿಂದ ನೊಂದಿದ್ದ ಎಮನ್ ಅಹ್ಮದ್ ಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ. ಎಲ್ಲರಂತೆ ಬದುಕಿ ಬಾಳುವ ಆಸೆ ಅವರಲ್ಲಿ ಮತ್ತೆ ಚಿಗುರೊಡೆದಿದೆ.
ಮುಂಬೈಯ ಸೈಫೀ ಆಸ್ಪತ್ರೆಯಲ್ಲಿ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ 36 ವರ್ಷದ ಎಮನ್ ಅಹ್ಮದ್ ಗೆ ಇಲ್ಲಿ ಕೂಡ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಬು ದಾಬಿಯ ಬುರ್ಜಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಅಬು ಧಾಬಿಗೆ ಬಂದು ಮೂರು ತಿಂಗಳು ಕಳೆದ ನಂತರ ಇದೀಗ ಎಮನ್ ತೂಕ ಇದೀಗ ಬರೋಬ್ಬರಿ 65 ಕೆಜಿ ಇಳಿದಿದೆ.
ನಿನ್ನೆ ಆಸ್ಪತ್ರೆಯ ಆವರಣದಲ್ಲಿ ವೈದ್ಯರು ಸುದ್ದಿಗೋಷ್ಠಿ ನಡೆಸಿ ಎಮನ್ ಳ ಆರೋಗ್ಯದ ಬಗ್ಗೆ ವಿವರ ನೀಡಿದರು. ಆಕೆಯ ಈಗಿನ ತೂಕದ ಬಗ್ಗೆ ವಿವರ ನೀಡಲು ನಿರಾಕರಿಸಿದ ವೈದ್ಯರು ಎಮನ್ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಲ್ಲಿ ತುಂಬಾ ಸುಧಾರಣೆ ಕಂಡುಬಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ತೂಕ ಕಳೆದುಕೊಳ್ಳುವ ಅವಶ್ಯಕತೆಯಿದ್ದರೂ ಕೂಡ ಆಕೆ ಸಂಪೂರ್ಣ ಗುಣಮುಖಳಾಗಬಹುದೆಂಬ ವಿಶ್ವಾಸವನ್ನು ವೈದ್ಯರು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಚಿಕಿತ್ಸೆTreatmentEgyptಈಜಿಪ್ಟ್Eman Ahmedಎಮನ್ ಅಹ್ಮದ್Heaviest womanAbu Dabi doctorಡಢೂತಿ ಮಹಿಳೆಅಬು ದಾಬಿ ವೈದ್ಯರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


