ವಿದೇಶಾಂಗ ಇಲಾಖೆ ವಕ್ತಾರರಾಗಿ ಗೋಪಾಲ್ ಬಾಗ್ಲೆ ಬದಲಿಗೆ ರವೀಶ್ ಕುಮಾರ್
ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್ ವಿದೇಶಾಂಗ....

Published On :
ನವದೆಹಲಿ: ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್ ವಿದೇಶಾಂಗ ಸಚಿವಾಲಯದ ಮುಂದಿನ ವಕ್ತಾರರಾಗಿ ನೇಮಕಗೊಳ್ಳಲಿದ್ದಾರೆ.
ಹಿರಿಯ ರಾಯಭಾರಿ ಮತ್ತು ಪ್ರಸ್ತುತ ವಿದೇಶಾಂಗ ಸಚಿವಾಲಯದ ವಕ್ತಾರರಾಗಿರುವ ಗೋಪಾಲ್ ಬಗ್ಲೆ ಅವರು ಪ್ರಧಾನ ಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿಯಾಗಿ ನಿನ್ನೆ ನೇಮಕಗೊಂಡಿರುವುದರಿಂದ ಅವರ ಸ್ಥಾನಕ್ಕೆ ರವೀಶ್ ಕುಮಾರ್ ನೇಮಕಗೊಳ್ಳಲಿದ್ದಾರೆ.
ಪ್ರಧಾನಿ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿ ಬಗ್ಲೆ 5 ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಕೇಂದ್ರ ಸಂಪುಟದ ನೇಮಕ ಸಮಿತಿ ಬಗ್ಲೆಯವರ ನೇಮಕಕ್ಕೆ 3 ವರ್ಷಗಳ ಹಿಂದೆ ಅನುಮೋದನೆ ನೀಡಿತ್ತು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಗೋಪಾಲ್ ಬಗ್ಲೆ 1992 ರ ಬ್ಯಾಚ್ ನ ಭಾರತೀಯ ವಿದೇಶ ಸೇವಾ ಇಲಾಖೆ ಅಧಿಕಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
spokespersonವಿದೇಶಾಂಗ ಸಚಿವಾಲಯExternal Affairs MinistryFrankfurtವಕ್ತಾರರುRaveesh Kumarರವೀಶ್ ಕುಮಾರ್Consul General of Indiaಫ್ರಾಂಕ್ ಫರ್ಟ್ಕಾನ್ಸಲ್ ಜನರಲ್ ಆಫ್ ಇಂಡಿಯಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


