ಚುನಾವಣಾ ಬಾಂಡ್ ವ್ಯವಸ್ಥೆ ಜಾರಿಗೆ ಸರ್ಕಾರ ಸಕ್ರಿಯ ಕೆಲಸ: ಅರುಣ್ ಜೇಟ್ಲಿ
ಚುನಾವಣೆ ಸಂದರ್ಭದ ಖರ್ಚು ವೆಚ್ಚದ ಬಗ್ಗೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ...

Published On :
ನವದೆಹಲಿ: ಚುನಾವಣೆ ಸಂದರ್ಭದ ಖರ್ಚು ವೆಚ್ಚದ ಬಗ್ಗೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿ ಕಾರ್ಯಪ್ರವೃತ್ತವಾಗಿದೆ. ಆದರೆ ಯಾವುದೇ ರಾಜಕೀಯ ಪಕ್ಷಗಳು ಹಣದ ಮೂಲವನ್ನು ಬಹಿರಂಗಪಡಿಸಲು ಮುಂದೆ ಬರುತ್ತಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯ ಸಿಕ್ಕಿದ ಕಳೆದ 70 ವರ್ಷಗಳ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಕಾಣದಿರುವ ಮೂಲಗಳಿಂದ ಹಣ ಸಂಗ್ರಹವಾಗುತ್ತವೆ. ಚುನಾಯಿತ ಪ್ರತಿನಿಧಿಗಳು, ಸರ್ಕಾರಗಳು, ರಾಜಕೀಯ ಪಕ್ಷಗಳು, ಸಂಸತ್ತು ಮತ್ತು ಚುನಾವಣಾ ಆಯೋಗ ಸಹ ಹಣ ಎಲ್ಲಿಂದ ಬರುತ್ತದೆ, ಎಷ್ಟು ಖರ್ಚಾಗುತ್ತವೆ ಎಂದು ಪರೀಕ್ಷಿಸುವಲ್ಲಿ ವಿಫಲವಾಗಿದೆ ಎಂದರು.
ರಾಜಕೀಯಕ್ಕಾಗಿ ಬಳಕೆಯಾಗುವ ಹಣದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಈ ವರ್ಷದ ಕೇಂದ್ರ ಬಜೆಟ್ ಭಾಷಣದಲ್ಲಿ ಅರುಣ್ ಜೇಟ್ಲಿಯವರು, 2,000 ನೋಟಿನ ರೂಪದಲ್ಲಿ ರಾಜಕೀಯ ಪಕ್ಷಗಳಿಗೆ ನಗದು ಕೊಡುಗೆಯಾಗಿ ಬರುವ ಹಣವನ್ನು ತಡೆಗಟ್ಟಲು ಚುನಾವಣಾ ಬಾಂಡ್ ಗಳನ್ನು ಪರಿಚಯಿಸಿದ್ದರು.
ಸಂಸತ್ತಿನಲ್ಲಿ, ಮೌಖಿಕವಾಗಿ ಮತ್ತು ಬರಹ ರೂಪದಲ್ಲಿ ಉತ್ತಮ ಸಲಹೆಗಳನ್ನು ನೀಡುವಂತೆ ರಾಜಕೀಯ ಪಕ್ಷಗಳನ್ನು ಕೋರಿದ್ದೆ. ಆದರೆ ಇಲ್ಲಿಯವರೆಗೆ ಯಾರೂ ಕೂಡ ಮುಂದೆ ಬಂದು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಎಲ್ಲರೂ ತೃಪ್ತರಾಗಿದ್ದಾರೆ ಎನಿಸುತ್ತದೆ ಎಂದು ದೆಹಲಿ ಆರ್ಥಿಕ ಖಾಸಗಿ ಸಭೆಯಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arun Jaitleyಅರುಣ್ ಜೇಟ್ಲಿfundಹಣPolitical partiesರಾಜಕೀಯ ಪಕ್ಷಗಳುElectoral bond mechanismಚುನಾವಣಾ ಬಾಂಡ್ ವ್ಯವಸ್ಥೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


