ಟಿಡಿಪಿ ಸಂಸದ ದಿವಾಕರ್ ರೆಡ್ಡಿ ನಿಷೇಧ ಹಿಂಪಡೆದ ಇಂಡಿಗೊ
ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ್ದಕ್ಕಾಗಿ ಟಿಡಿಪಿ ಸಂಸದ ದಿವಾಕರ್ ರೆಡ್ಡಿ ಅವರಿಗೆ ವಿಧಿಸಿದ್ದ ....

Published On :
ನವದೆಹಲಿ: ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ್ದಕ್ಕಾಗಿ ಟಿಡಿಪಿ ಸಂಸದ ದಿವಾಕರ್ ರೆಡ್ಡಿ ಅವರಿಗೆ ವಿಧಿಸಿದ್ದ ನಿಷೇಧವನ್ನು ಬುಧವಾರ ಇಂಡಿಗೊ ವಿಮಾನಯಾನ ಸಂಸ್ಥೆ ಹಿಂಪಡೆದಿದೆ.
ಜೂನ್ 15ರಂದು ದಿವಾಕರ್ ರೆಡ್ಡಿ ಅವರು ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಸಂಸ್ಥೆಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಕಾರಣಕ್ಕೆ ದಿವಾಕರ್ ರೆಡ್ಡಿ ಅವರ ವಿಮಾನ ಪ್ರಯಾಣದ ಮೇಲೆ ಇಂಡಿಗೊ ಸೇರಿದಂತೆ ಹಲವು ನಾಗರಿಕ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದವು.
ದಿವಾಕರ್ ರೆಡ್ಡಿ ಅವರ ವಿಮಾನ ಪ್ರಮಾಣ ನಿಷೇಧ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಸಂಸದ ವೈ.ಎಸ್. ಚೌಧರಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಇಂಡಿಗೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಔತಣಕೂಟದಲ್ಲಿ ದಿವಾಕರ್ ರೆಡ್ಡಿ ಮತ್ತು ಇಂಡಿಗೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾತುಕತೆ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ದಿವಾಕರ್ ರೆಡ್ಡಿ ಅವರ ವಿಮಾನ ಪ್ರಮಾಣದ ಮೇಲಿನ ನಿಷೇಧವನ್ನು ವಾಪಸ್ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿರುವ ಇಂಡಿಗೋ, ಈ ವಿಷಯವನ್ನು ಭಾರತೀಯ ವಿಮಾನಯಾನ ಸಂಸ್ಥೆಗಳ ಸಂಘಟನೆಯ (ಎಫ್‌ಐಎ) ಗಮನಕ್ಕೂ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


