ಮಣಿಪುರ: ಬಿಜೆಪಿ ನೇತೃತ್ವದ ಸರ್ಕಾರ ಸೇರಿದ ಇಬ್ಬರು ಕಾಂಗ್ರೆಸ್ ಶಾಸಕರು
ಕಾಂಗ್ರೆಸ್ ತೊರೆದ ಇಬ್ಬರು ಶಾಸಕರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಆಡಳಿತ ರೂಢ ಸರ್ಕಾರದ ಶಾಸಕರ ಸಂಖ್ಯೆ ...

Published On :
ಇಂಫಾಲ: ಕಾಂಗ್ರೆಸ್ ತೊರೆದು ಇಬ್ಬರು ಶಾಸಕರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಆಡಳಿತ ರೂಢ ಸರ್ಕಾರದ ಶಾಸಕರ ಸಂಖ್ಯೆ 40 ಕ್ಕೇರಿದೆ.
ಮಣಿಪುರ ವಿಧಾನಸಭೆಯಲ್ಲಿ ಶಾಸಕರ ಒಟ್ಟು ಸಂಖ್ಯೆ 60, ಕಾಂಗ್ರೆಸ್ ಶಾಸಕರಾದ ಕ್ಷೇತ್ರಿಮಾಯುಮ್ ಬಿರೇನ್ ಸಿಂಗ್ ಮತ್ತು ಪೊನಮ್ ಬ್ರೊಜೆನ್ ಕಳೆದ ಶನಿವಾರ ಬಿಜೆಪಿ ಸೇರಿದ್ದಾರೆ. ಇದರಿಂದ ಬಿಜೆಪಿ ಶಾಸಕರ ಸಂಖ್ಯೆ 31 ಕ್ಕೇರಿದೆ,
ಸದ್ಯ ಬಿಜೆಪಿ ಶಾಸಕರ ಸಂಖ್ಯೆ 31 ಇದೆ. ಎನ್ ಪಿಎಫ್ ನ ನಾಲ್ಕು ಹಾಗೂ ಎನ್ ಪಿಪಿಯ ನಾಲ್ಕು ಮತ್ತು ಒಬ್ಬ ಸ್ವತಂತ್ರ್ಯ ಅಭ್ಯರ್ಥಿ ಸೇರಿದಂತೆ ಒಟ್ಟು 9 ಶಾಸಕರು ಸಿಎಂ ಎನ್ ಬಿರೇನ್ ಸಿಂಗ್ ಸರ್ಕಾರದಲ್ಲಿದ್ದಾರೆ.
2017ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಟ್ಟು 28 ಶಾಸಕರು ಆಯ್ಕೆಯಾಗಿದ್ದರು, ಅದರಲ್ಲಿ 8 ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


