ಕಳೆದ 7 ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 102 ಉಗ್ರರ ಹತ್ಯೆ: ಹಿಟ್ ಲಿಸ್ಟ್ ನಲ್ಲಿ ಮತ್ತಷ್ಟು ಮಂದಿ
ಕಳೆದ ಜನವರಿಯಿಂದ ಜುಲೈವರೆಗೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 102 ಮಂದಿ ಉಗ್ರರು ...

Published On :
ಜಮ್ಮು: ಕಳೆದ ಜನವರಿಯಿಂದ ಜುಲೈವರೆಗೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 102 ಮಂದಿ ಉಗ್ರರು ಹತರಾಗಿದ್ದಾರೆ ಎಂದಪ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲಷ್ಕರ್ -ಇ -ತಯ್ಬಾ, ಜೈಶ್-ಇ -ಮೊಹಮ್ಮದ್, ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಮತ್ತಷ್ಟು ಉಗ್ರರು ಹಿಟ್ ಲಿಸ್ಟ್ ನಲ್ಲಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಆರು ಪೊಲೀಸ್ ಅಧಿಕಾರಿಗಳ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಲಷ್ಕರ್ -ಇ- ತಯ್ಬಾ ಕಮಾಂಡರ್ ಬಶೀರ್ ಲಷ್ಕರಿ ಕೂಡ ಲಿಸ್ಟ್ ನಲ್ಲಿದ್ದಾನೆ.
ಜುಲೈ 12 ರ ವರೆಗೂ 102 ಉಗ್ರರನ್ನು ಕೊಲ್ಲಲಾಗಿದೆ. ಕಳೆದ 7 ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಸಂಖ್ಯೆಯಾಗಿದೆ. 2010 ರಲ್ಲಿ ಅತಿ ಹೆಚ್ಚು ಆಂದರೆ 156 ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಕಳೆದ ವರ್ಷ 22 ಉಗ್ರರು ಸಾವನ್ನಪ್ಪಿದ್ದರು, 2015 ಮತ್ತು 2014 ರಲ್ಲಿ 51 ಉಗ್ರರು, 2013 ರಲ್ಲಿ 43, 2012 ರಲ್ಲಿ 37, 2011 ರಲ್ಲಿ 61 ಉಗ್ರರನ್ನು ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿಯಿಂದ ತಿಳಿದು ಬಂದಿದೆ.
ವಿವಿಧ ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆ ತಂತ್ರದಿಂದ ಉಗ್ರರನ್ನು ಕೊಲ್ಲಲಾಗಿದೆ. ಆದರೆ ಉಗ್ರರು ತಮ್ಮ ಪ್ರಾಬಲ್ಯವನ್ನು ಮುಂದುವರಿಸಲು ಪ್ರತಿಯಾಗಿ ದಾಳಿ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿವೈಎಸ್ ಪಿ ಸೇರಿದಂತೆ 7 ಮಂದಿ ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರರನ್ನು ಪೊಲೀಸರು ಈಗಾಗಲೇ ಕೊಂದಿದ್ದಾರೆ. ಅಮರನಾಥ್ ಯಾತ್ರಿಗಳ ಮೇಲೆ ನಡೆದ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಎಲ್ ಇಟಿ ಕಮಾಂಡರ್ ಅಬು ಇಸ್ಮಾಯಿಲ್ ಗಾಗಿ ಸಾಮೂಹಿಕ ಶೋದ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಎಲ್ ಇಟಿ ವಿಭಾಗಿಯ ಕಮಾಂಡರ್ ಅಬು ದೌಜನ್ ಅಲಿಯಾಸ್ ಹಫೀಜ್ ಬಶೀರ್ ವನಿ, ಶೌಕತ್ ತಕ್ ಅಲಿಯಾಸ್ ಹುಜೈಫಾ ಸೇರಿದಂತೆ ಹಲವರು ಹಿಟ್ ಲಿಸ್ಟ್ ನಲ್ಲಿದ್ದಾರೆ.
ಪಾಕಿಸ್ತಾನಿ ಪೌರ ಹಾಗೂ ಜೈಶ್-ಇ ಮೊಹಮದ್ ಸಂಘಟನೆಯ ವಿಭಾಗೀಯ ಕಮಾಂಡರ್ ಅಬು ಹಮಾಸ್ ಕೂಡ ಹಿಟ್ ಲಿಸ್ಟ್ ನಲ್ಲಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹತ್ಯೆಜಮ್ಮು ಕಾಶ್ಮೀರJammu and Kashmirsecurity forcesKilledರಕ್ಷಣಾ ಪಡೆ102 militants7 Months102 ಉಗ್ರರು7 ತಿಂಗಳು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


